Home ಧಾರ್ಮಿಕ ಸುದ್ದಿ ಶ್ರೀ ಜನಾರ್ದನ ದೇವಸ್ಥಾನ ಮಹಾರಥೋತ್ಸವ : ಉಜಿರೆ

ಶ್ರೀ ಜನಾರ್ದನ ದೇವಸ್ಥಾನ ಮಹಾರಥೋತ್ಸವ : ಉಜಿರೆ

1969
0
SHARE

ಜಿರೆ ಶ್ರೀ ಜನಾರ್ದನ ದೇವಸ್ಥಾನ ಪರಿಸರ ಸದಾ ಧಾರ್ಮಿಕ ವಾತಾವರಣ ಸೃಷ್ಟಿಯಾಗಿದೆ. ಅಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಶನಿವಾರಗಳಂದು ಮಹಿಳಾ ತಂಡಗಳಿಂದ ಭಜನೆ, ಸಂಕಷ್ಟ ಚತುರ್ಥಿ ದಿನಗಳಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ, ಯಕ್ಷಗಾನ, ಹಿಮ್ಮೇಳ – ಮುಮ್ಮೇಳ ತರಬೇತಿ ಕೇಂದ್ರಗಳು, ಯಕ್ಷಗಾನ -ಗಮಕ ಸಪ್ತಾಹ, ತಾಳಮದ್ದಳೆ ಸಪ್ತಾಹ, ಉದಯಾಸ್ತಮಾನ ಭಜನೆ, ಅಧ್ಯಾತ್ಮಿಕ ಶಿಬಿರಗಳು, ವಸಂತವೇದ ಪಾಠ ಶಿಬಿರ, ಲಕ್ಷತುಳಸಿ ಅರ್ಚನೆ, ಪ್ರತಿಭಾ ಪುರಸ್ಕಾರ, ಸಾಧಕರ ಸಮ್ಮಾನ, ವ್ಯಕ್ತಿತ್ವ ವಿಕಸನ, ಆರೋಗ್ಯ, ರಕ್ತದಾನ ಶಿಬಿರ, ಬೇಸಿಗೆ ಶಿಬಿರ, ಕನ್ನಿಕಾ ಶಿಬಿರ, ಕಲೆ ಹಾಗೂ ಸಂಸ್ಕಾರವನ್ನು ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಆಯೋಜನೆ, ಸಾಹಿತ್ಯ, ಸಹಕಾರ ಸಮ್ಮೇಳನಗಳ ಸಂಘಟನೆ, ಅಷ್ಠ ಮಠದ ಯತಿಗಳಿಗೆ ತುಲಾಭಾರದ ಗೌರವ ಹೀಗೆ ಕ್ಷೇತ್ರದ ಅಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರ ಆಸಕ್ತಿ, ಅಭಿರುಚಿ, ಸಹಕಾರ ಅವಿಸ್ಮರಣೀಯ.

ಬೆಳೆಯುತ್ತಿರುವ ಉಜಿರೆ ನಗರಕ್ಕೆ ರಾಷ್ಟ್ರೀಯ ಬ್ಯಾಂಕ್‌ ಶಾಖೆಗಳು, ಸಹಕಾರ ಸಂಘಗಳು, ಬ್ಯಾಂಕ್‌ ಎಟಿಎಂಗಳು, ಹೊಸ ಹೊಸ ವಸತಿ ಗೃಹಗಳು, ವಾಣಿಜ್ಯ ಸಂಕೀರ್ಣಗಳು, ಧರ್ಮಸ್ಥಳದ ಆಸ್ಪತ್ರೆ, ರಾಷ್ಟ್ರಿಯ, ಅಂತರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಿದ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ, ಸೌಲಭ್ಯಯುಕ್ತ ಈಜುಕೊಳ, ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ, ತಾ| ರಬ್ಬರ್‌ ಬೆಳೆಗಾರರ ಮಾರಾಟ ಹಾಗೂ ಸಂಸ್ಕರಣಾ ಸಹಕಾರ ಸಂಘ ಹೀಗೆ ಎಲ್ಲ ಬಗೆಯ ಸೌಲಭ್ಯಗಳು, ಸಕಲ ಸೌಕರ್ಯಯುಕ್ತ ಹಿಂದೂ ರುದ್ರಭೂಮಿ, ಚರ್ಚ್‌, ಮಸೀದಿ, ಮಹಮ್ಮಾಯಿ (ಮಾರಿಗುಡಿ)ದೇವಸ್ಥಾನ ಎಲ್ಲವೂ ಇದೆ ಉಜಿರೆಯಲ್ಲಿ. ಉಜಿರೆ ಧರ್ಮಸ್ಥಳದ ಹೆಬ್ಟಾಗಿಲು ಎಂದೇ ಪರಿಗಣಿಸಲ್ಪಟ್ಟಿದೆ.

ಕಳೆದ 5 ವರ್ಷಗಳಿಂದ ಧರ್ಮಸ್ಥಳ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳದ ಮಂಜುನಾಥನೆಡೆಗೆ ಹಮ್ಮಿಕೊಂಡ ಭಕ್ತಿ ಸಂಕೀರ್ತನಾ ಪಾದಯಾತ್ರೆಯಲ್ಲಿ ಸಹಸ್ರಾರು ಭಕ್ತಾದಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿರುವುದು ದಾಖಲೆಯೇ ಸರಿ.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವಿಶೇಷ ಪರ್ವಗಳು

ಶ್ರೀ ಜನಾರ್ದನ ದೇವಸ್ಥಾನ ಸುತ್ತಲಿನ ಗ್ರಾಮಗಳಿಗೆಲ್ಲ ಶ್ರದ್ಧಾಭಕ್ತಿಯ ಆರಾಧನಾ ಕೇಂದ್ರ. ಇಲ್ಲಿ ವೈಷ್ಣವ ಹಾಗೂ ಶೈವ ಪರಂಪರೆಗಳ ಸಮನ್ವಯವಿದೆ. ಶ್ರೀ ಜನಾರ್ದನ ಸ್ವಾಮಿ ಪ್ರಧಾನ ಆರಾಧ್ಯ ದೇವನಾದರೆ ಈಶ್ವರ (ಮಂಜುಳೇಶ)ನ ಸಾನ್ನಿಧ್ಯವೂ ವಿಶೇಷವಾಗಿದೆ. ಸನ್ನಿಧಿಯಲ್ಲಿ ತ್ರಿಕಾಲಗಳಲ್ಲಿ ಪೂಜೆ, ವಿಶೇಷ ಪರ್ವ ದಿನಗಳಲ್ಲಿ ದೇವತಾ ಆರಾಧನೆ ನಡೆಯುತ್ತದೆ. ಸಂಕಷ್ಟ ಚತುರ್ಥಿ, ಗಣೇಶ ಚತುರ್ಥಿ ದಿನಗಳಲ್ಲಿ ಗಣಪತಿ ಹೋಮ ವಿಶೇಷ ಪೂಜೆ ನಡೆಯುವುದು. ನಾಗರ ಪಂಚಮಿಯಂದು ನಾಗ ದೇವರಿಗೆ ಪಂಚಾಮೃತ, ಸೀಯಾಳಾಭಿಷೇಕ, ತಂಬಿಲ, ಆಶ್ಲೇಷ ಬಲಿ ಸೇವೆಗಳು, ಈಶ್ವರನ ಸನ್ನಿಧಿಯಲ್ಲಿ ರುದ್ರಾಭಿಷೇಕ, ಮಹಾ ಶಿವರಾತ್ರಿ, ಅಮ್ಮನವರ ಸನ್ನಿಧಿಯಲ್ಲಿ ಕುಂಕುಮಾರ್ಚನೆ, ಹೂವಿನ ಪೂಜೆ, ರಂಗಪೂಜೆ, ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಪವಮಾನ ಅಭಿಷೇಕ, ಪಂಚಾಮೃತ ಅಭಿಷೇಕ, ಹಾಲು ಪಾಯಸ, ಅಷೊuೕತ್ತರ ಹಾಗೂ ಸರ್ವ ಸೇವೆಗಳು ನಡೆಯುತ್ತವೆ.

ಚೈತ್ರ ಮಾಸದ ಶುದ್ಧ ಪಾಡ್ಯದಂದು ಚಾಂದ್ರಮಾನ ಯುಗಾದಿ ಪ್ರಯುಕ್ತ ಸೀಯಾಳಾಭಿಷೇಕ, ಮೇಷ ಮಾಸದ ಮೊದಲ ದಿನ ವಿಷು ಹಾಗೂ ಸೌರಮಾನ ಯುಗಾದಿಯಂದು ಸೀಯಾಳಾಭಿಷೇಕ, ಚೈತ್ರ ಶುದ್ಧ ನವಮಿಯಂದು ರಾಮ ನವಮಿ ರಾತ್ರಿ ರಂಗಪೂಜೆ, ಅಷಾಡ ಶುದ್ಧ ಏಕಾದಶಿಯಂದು ತಪ್ತ ಮುದ್ರಾಧಾರಣೆ, ನಾಗರ ಪಂಚಮಿಯಂದು ನಾಗನಿಗೆ ತನು, ತಂಬಿಲ, ಶ್ರಾವಣ ಮಾಸ, ಬಹುಳ ಅಷ್ಟಮಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಘ್ಯರ್ ಪ್ರದಾನ, ಬಾದ್ರಪದ ಶುದ್ಧ ಚೌತಿಯಂದು 108 ತೆಂಗಿನ ಕಾಯಿ ಗಣಯಾಗ, ಅಶ್ವಯುಜ ಅಮಾವಾಸ್ಯೆಯಂದು ದೀಪಾವಳಿ, ಕಾರ್ತಿಕ ಹುಣ್ಣಿಮೆಯಂದು ಲಕ್ಷದೀಪೋತ್ಸವ , ರಂಗಪೂಜೆ, ಧನು ಸಂಕ್ರಮಣದಿಂದ ಮಕರ ಸಂಕ್ರಮಣದವರೆಗೆ ನಿತ್ಯ ಉಷ:-ಕಾಲದಲ್ಲಿ ಧನು ಪೂಜೆ, ಮಕರ ಸಂಕ್ರಮಣದಂದು ರಾತ್ರಿ ಧ್ವಜಾರೋಹಣಗೊಂಡು ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯುತ್ತದೆ.

ಉಜಿರೆ ಧಾರ್ಮಿಕ, ಶೆ„ಕ್ಷಣಿಕ, ಸಾಮಾಜಿಕ ಕೇಂದ್ರ

ಉಜಿರೆ ಬೆಳ್ತಂಗಡಿ ತಾಲೂಕಿನ ಅತಿ ದೊಡ್ಡ ಗ್ರಾಮ. ಉಜಿರೆ ಧಾರ್ಮಿಕವಾಗಿ, ಶೆ„ಕ್ಷಣಿಕವಾಗಿ, ಸಾಮಾಜಿಕವಾಗಿ ಕಳೆದೊಂದು ದಶಕದಲ್ಲಿ ಮಹತ್ತರ ಬದಲಾವಣೆ ಹಾಗೂ ಅಭಿವೃದ್ಧಿ ಕಂಡಿದೆ. ಉಜಿರೆ ನಗರವೂ ಸಾಕಷ್ಟು ಬೆಳೆದಿದೆ. ವ್ಯಾಪಾರ ವಹಿವಾಟು ವೃದ್ಧಿಸಿದೆ. ಕೆಜಿ ಯಿಂದ ಪಿಜಿ ವರೆಗಿನ ಎಲ್ಲ ಶಿಕ್ಷಣ ವ್ಯವಸ್ಥೆ ಧರ್ಮಸ್ಥಳದ ಕೊಡುಗೆಯಾಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಜ್ಞಾನ ಸಂಪನ್ನರನ್ನಾಗಿಸುತ್ತಿದೆ.

ಉಜಿರೆಯ ಹೃದಯ ಭಾಗದ ಎತ್ತರ ಪ್ರದೇಶದಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಾಲಯ ಆಸ್ತಿಕರ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಬೆಳೆಯುತ್ತಿದೆ, ಬೆಳಗುತ್ತಿದೆ. ದೇವಸ್ಥಾನ ಸುಮಾರು ಒಂದು ಸಾವಿರ ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿದೆ. ಕ್ರಿ.ಶ. 13ನೇ ಶತಮಾನದಲ್ಲಿ ಇಲ್ಲಿಗೆ ಆಗಮಿಸಿದ್ದ ಮಧ್ವಾಚಾರ್ಯರು ಕ್ಷೇತ್ರವನ್ನು ಉಚ್ಛಭೂತಿ (ತುಳುವಿನಲ್ಲಿ ಉಜೇರ್ಯ) (ಎತ್ತರದ ಪ್ರದೇಶವೆಂದರ್ಥ) ಎಂದೇ ಕರೆದಿದ್ದರು. ದೇವಾಲಯ ಕ್ರಿ.ಶ. 12ನೇ ಶತಮಾನಕ್ಕಿಂತ ಮೊದಲೇ ನಿರ್ಮಾಣಗೊಂಡಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ದೇವಾಲಯದ ಪ್ರಾಚೀನತೆಯ ಬಗ್ಗೆ ದೊರೆತ ಇನ್ನೊಂದು ಪುರಾವೆಯೆಂದರೆ ಜನಾರ್ದನ ಸ್ವಾಮಿಯ ಮೂಲ ಬಿಂಬದ ಕೆಳಭಾಗದಲ್ಲಿರುವ ಕಂಚಿನ ಪ್ರಭಾವಳಿಯ ಪ್ರಾಚೀನ ಬರಹದಂತೆ ಶಾರ್ವರೀ ನಾಮ ಸಂವತ್ಸರದ ಆದಿತ್ಯವಾರದಂದು ಮಕರ ಸಂಕ್ರಮಣದ ಮೊದಲ ದಿನ ವಸುದೇವ ಕಡಂಬನು ಉಜಿರೆಯ ವಿಷ್ಣುವಿಗೆ ಸಮರ್ಪಿತಮಸ್ತು ಎಂಬ ಬರಹ ಇಂಬು ನೀಡುತ್ತದೆ. ಖ್ಯಾತ ಇತಿಹಾಸ ತಜ್ಞ ದಿ| ಡಾ. ಪಿ. ಗುರುರಾಜ ಭಟ್ಟರು ಇದು ಮಧ್ವಾಚಾರ್ಯರಿಗಿಂತ ಪೂರ್ವದ ದೇವಾಲಯವೆಂದು ಅಭಿಪ್ರಾಯಪಟ್ಟಿದ್ದರು. ಮಧ್ವಾಚಾರ್ಯರು ಉಜಿರೆಯಲ್ಲಿ ವಿದ್ವಾಂಸರ ಜತೆ ತಾತ್ವಿಕ ಜಿಜ್ಞಾಸೆಗಳ ಬಗ್ಗೆ ಚರ್ಚೆ ನಡೆಸಿ ಕರ್ಮ ನಿರ್ಣಯ ಗ್ರಂಥ ರಚಿಸಿದ ಬಗ್ಗೆ ಉಲ್ಲೇಖವಿದೆ.

ದೇವತಾ ಸಾನಿಧ್ಯ

ಕ್ಷೇತ್ರದ ಪ್ರಧಾನ ದೇವರು ಶ್ರೀ ಜನಾರ್ದನ ಸ್ವಾಮಿ. ಗಜಪೃಷ್ಟಾಕಾರದ ಗರ್ಭಗುಡಿಯ ಎಡಭಾಗದಲ್ಲಿ ಅಮ್ಮನವರು. ಬಲಭಾಗದಲ್ಲಿ ಮಂಜುಳೇಶ ದೇವರನ್ನು 2001ರಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ನೈಋತ್ಯ ಪಾರ್ಶ್ವದಲ್ಲಿ ಬಲಮುರಿ ಗಣಪತಿ, ಈಶಾನ್ಯ ಮೂಲೆಯಲ್ಲಿ ನೆತ್ತರ್‌ ಮುಗುಳಿ ದೆ„ವ ಸಾನ್ನಿಧ್ಯವಿದೆ. ಹೊರ ಆವರಣದ ಆಗ್ನೇಯ ಮೂಲೆಯಲ್ಲಿ ಈಚೆಗೆ ಪ್ರತಿಷ್ಠಾಪಿಸಲ್ಪಟ್ಟ ಮದ್ವಾಚಾರ್ಯರ ವಿಗ್ರಹದ ಮಧ್ವ ಮಂಟಪವಿದೆ. ಪಶ್ಚಿಮದಲ್ಲಿ ವಸಂತಕಟ್ಟೆ, ಕೊಡಮಣಿತ್ತಾಯ ದೆ„ವದ ಗುಡಿ ಮತ್ತು ವನ ಶಾಸ್ತಾರಕಟ್ಟೆಯಿದೆ. ದೇವಸ್ಥಾನದ ಮುಂಭಾಗದ ಪೂರ್ವದಲ್ಲಿ ಅಶ್ವತ್ಥಕಟ್ಟೆ (ರಥಬೀದಿ) ಹಾಗೂ ಸುರ್ಯ ರಸ್ತೆ ಬಳಿ ದೇವಸ್ಥಾನದ ಕೆರೆಯಿದೆ. ದೇವಾಲಯ 1865ರಲ್ಲಿ ಪುನರ್‌ ನಿರ್ಮಾಣಗೊಂಡು, 2001ರಲ್ಲಿ ಶಿಲಾಮಯ ಸುಂದರ ದೇವಾಲಯ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆದಿತ್ತು.

ಶ್ರೀ ಜನಾರ್ದನ ಸ್ವಾಮಿ ವಿಗ್ರಹ ಸುಮಾರು ಮೂರುವರೆ ಅಡಿ ಎತ್ತರದ ಸಮ ಭಂಗಿಯ ಪ್ರಸನ್ನ ಮುದ್ರೆಯಲ್ಲಿ ಶಂಖ, ಚಕ್ರ, ಗದಾ ಪದ್ಮಧಾರಿಯಾಗಿ ಚತುರ್ಭುಜ, ಕಿರೀಟ ಮಕರಕುಂಡಲ ಧರಿಸಿಕೊಂಡು ನಿಂತ ಭಂಗಿಯಲ್ಲಿದೆ. ಸ್ವಾಮಿಯ ಆರಾಧನೆಯಿಂದ ಸಂತಾನ – ಆರೋಗ್ಯ ಭಾಗ್ಯ- ವಿವಾಹ ಪರಿಹಾರ, ಮಾನಸಿಕ ಶಾಂತಿ ನೆಮ್ಮದಿ ಪ್ರಾಪ್ತಿಯಾಗುವುದೆಂಬ ಅಚಲ ನಂಬಿಕೆ ಭಕ್ತರದ್ದು. ಪಡ್ವೆಟ್ನಾಯ ಮನೆತನದವರು ದೇವಾಲಯದ ಆಡಳಿತಗಾರರಾಗಿ ಕೃಷ್ಣ ಪಡ್ವೆಟ್ನಾಯರು (1892-1975), ರಾಮಕೃಷ್ಣ ಪಡ್ವೆಟ್ನಾಯರು (1976-1988)ಹಾಗೂ ಪ್ರಸ್ತುತ 1989 ರಿಂದ ವಿಜಯರಾಘವ ಪಡ್ವೆಟ್ನಾಯರು ಆಡಳಿತ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ದೇವಸ್ಥಾನದ ಅಭಿವೃದ್ಧಿ ಕಾರ್ಯ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಶರತ್‌ಕೃಷ್ಣ ಪಡ್ವೆಟ್ನಾಯರು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2013ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ನಡೆಸಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪೊಸಲ್ತಾಯಿ, ಉಳ್ಳಾಲ್ತಿ ಹಾಗೂ ಕುಮಾರಸ್ವಾಮಿ ದೆ„ವಗಳ ಸಂಬಂಧವಿದೆ.

ಅಭಿವೃದ್ಧಿ ಕಾರ್ಯಗಳು

ಇತ್ತೀಚಿನ ವರ್ಷಗಳಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರ ವಿಶೇಷ ಆಸಕ್ತಿ, ಪರಿಶ್ರಮ ಹಾಗೂ ಭಕ್ತಾದಿ ದಾನಿಗಳ ಸಹಾಯ ಸಹಕಾರದಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ಕೈಗೂಡಿವೆ. ದೇವಸ್ಥಾನದ ಗೋಪುರ, ಮೇಲ್ಛಾವಣಿ, ಹೆದ್ದಾರಿ ಬಳಿ ಶ್ರೀ ಜನಾರ್ದನ ಸ್ವಾಮಿ ಮಹಾದ್ವಾರ, ಪುಷ್ಕರಣಿಯ ನವೀಕರಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಶ್ರೀ ರಾಮಕೃಷ್ಣ ಸಭಾ ಮಂಟಪ ಮತ್ತು ಶಾರದಾ ಮಂಟಪ, ಪಾಕಶಾಲೆ, ಮಧ್ವಮಂಟಪ, ಶ್ರೀ ಮಹಮ್ಮಾಯಿ (ಮಾರಿಗುಡಿ) ದೇವಸ್ಥಾನ ನವೀಕರಣ ಬ್ರಹ್ಮಕಲಶೋತ್ಸವ, 2001 ಮತ್ತು 2013ರಲ್ಲಿ ಬ್ರಹ್ಮಕಲಶೋತ್ಸವ, ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಮೂಲಕ ಪ್ರತಿ ವರ್ಷ 20 ದಿನಗಳ ವಸಂತ ವೇದಪಾಠ ಶಿಬಿರ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರತಿ ಶನಿವಾರ, ಮಂಗಳವಾರ ಹಾಗೂ ಶುಕ್ರವಾರದಂದು ಭಜನೆ, ಸಂಕಷ್ಟ ಚತುರ್ಥಿ ದಿನ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ – ತಾಳಮದ್ದಳೆ ಕಾರ್ಯಕ್ರಮಗಳು, ಜಾತ್ರಾ ಮಹೋತ್ಸವದಲ್ಲಿ ಭಕ್ತಿ ಸಂಗೀತ- ನೃತ್ಯ- ಭರತನಾಟ್ಯ, ಸಂಸ್ಕಾರ- ಸಂಸ್ಕೃತಿ ಬಿಂಬಿಸುವ ಶಿಬಿರಗಳು, ಪ್ರತಿವರ್ಷ ಲಕ್ಷ ತುಳಸಿ ಅರ್ಚನೆ, ಆರೋಗ್ಯ ಹಾಗೂ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ಸಹಭಾಗಿತ್ವ, ಪ್ರತಿ ಸಂಕ್ರಮಣದಂದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಯಕ್ಷಗಾನ ಬಯಲಾಟ- ತಾಳಮದ್ದಳೆ- ಗಮಕ ಸಪ್ತಾಹಗಳು, ಕಲೆ ಮತ್ತು ಕಲಾವಿದರನ್ನು ಗುರುತಿಸಿ ಪುರಸ್ಕರಿಸುವ ಪರಂಪರೆ ಬೆಳೆದು ಬಂದಿದೆ.

ಉಜಿರೆಯ ಆಶಾ ರಾವ್‌ ಸುಪುತ್ರರಿಂದ ರಜತ ಪಾಲಕಿ (2007) ಮತ್ತು ರಜತ ರಥ (2016)ವನ್ನು ಸೇವಾರೂಪವಾಗಿ ಕ್ಷೇತ್ರಕ್ಕೆ ಸಮರ್ಪಿಸಲ್ಪಟ್ಟಿದೆ. 2017 ಜ. 19 ರಂದು ಉಜಿರೆಯ ಉದ್ಯಮಿ ಯು. ಸದಾಶಿವ ಶೆಟ್ಟಿ ಮತ್ತು ಮಕ್ಕಳು ಮರದಿಂದ ಕಲಾತ್ಮಕವಾಗಿ ನಿರ್ಮಿಸಿದ ಚಂದ್ರಮಂಡಲ ರಥವನ್ನು ಸಮರ್ಪಿಸಿದ್ದಾರೆ. ಪ್ರತಿವರ್ಷ ಭಕ್ತಾದಿಗಳಿಗೆ ಸುಬ್ರಹ್ಮಣ್ಯ ಶ್ರೀಗಳ ಮೂಲಕ ತಪ್ತ ಮುದ್ರಾಧಾರಣೆ ನಡೆಸಲಾಗುತ್ತಿದೆ. 2017ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ.

ಮುಂದಿನ ಯೋಜನೆಗಳು

ಉಜಿರೆ ಶ್ರೀ ಜನಾರ್ದನ ಸ್ವಾಮಿಯ ವರ್ಷಾವಧಿ ಜಾತ್ರೆಗೆ ಹೊರಾಂಗಣದಲ್ಲಿ ಉತ್ಸವಕ್ಕಾಗಿ ನೂತನ ಉತ್ಸವ ರಥ ನಿರ್ಮಾಣಗೊಳ್ಳುತ್ತಿದ್ದು, ಭಕ್ತಾಧಿಗಳ ಸಹಕಾರ ನಿರೀಕ್ಷಿಸಲಾಗಿದೆ. ದೇವಸ್ಥಾನದ ಮುಂದೆ ರಾಜಗೋಪುರ ಹಾಗೂ ಎಡಭಾಗದ ಬಯಲಲ್ಲಿ ಕಲ್ಯಾಣ ಮಂಟಪ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಪ್ರವಚನ ಸಪ್ತಾಹ

ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯ ವಾರ್ಷಿಕೋತ್ಸವ ಸಂರ್ದದಲ್ಲಿ ಕಳೆದ ವರ್ಷ ನಿಡ್ಲೆಯ ವಿದ್ವಾಂಸ ಡಾ| ಎಂ. ಉದಯಕುಮಾರ್‌ ಸರಳತ್ತಾಯರಿಂದ ಉಜಿರೆ ಶಮನ ಕ್ಲಿನಿಕ್‌ನ ಚಕ್ರಪಾಣಿ ಸರಳಾಯರ ಪ್ರಾಯೋಜಕತ್ವದಲ್ಲಿ ಭಾಗವತ ಪುರಾಣ ಸಪ್ತಾಹ ನಡೆದಿದ್ದರೆ ಈ ವರ್ಷ ಜನವರಿ 14 ರಿಂದ 20 ರ ವರೆಗೆ ಪ್ರತಿ ಬೆಳಿಗ್ಗೆ 9.30 ರಿಂದ 12.30 ರ ವರೆಗೆ ಶ್ರೀ ವಿಷ್ಣು ಪುರಾಣ ಸಪ್ತಾಹ ಪ್ರವಚನ ನಡೆದಿದೆ.

ಕಾರ್ತಿಕ ಮಾಸದ ಶುದ್ಧ ಏಕಾದಶಿಯಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾದ ವತಿಯಿಂದ ಮಹಿಳಾ ಘಟಕ ಮತ್ತು ಯುವ ವಿಪ್ರ ವೇದಿಕೆ ವತಿಯಿಂದ ತುಳಸಿ ಸಂಕೀರ್ತನೆ ನಡೆಸಲಾಗಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸಾಮೂಹಿಕ ಸಂಕೀರ್ತನೆಯಲ್ಲಿ ಪಾಲ್ಗೊಂಡಿದ್ದರು.

ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿಯ ಸದಸ್ಯರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಭಜನಾ ಸೇವೆ, ವಿಷ್ಣು ಸಹಸ್ರನಾಮ ಪಾರಾಯಣ ಸಾಗೂ ಲಕ್ಷ್ಮೀ ಶೋಭಾನೆ ನಡೆಸಿಕೊಡುತ್ತಿದ್ದು, ನವರಾತ್ರಿ, ಉತ್ಸವ, ವಿಶೇಷ ಸಂದರ್ಭಗಳಲ್ಲಿ ಪರಿಸರದ ಧಾರ್ಮಿಕ ದೇವಾಲಯ, ರಾಘವೇಂದ್ರ ಮಠಗಳಿಗೆ ತೆರಳಿ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಶಿವಳ್ಳಿ ವಿಪ್ರ ಬಾಂಧವರು ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ವಿಷ್ಣು ಸಹಸ್ರನಾಮ ಪಾರಾಯಣವನ್ನು ನಡೆಸುತ್ತಿದ್ದು ಒಂದು ಲಕ್ಷ ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಿದಾಗ ಲೋಕಶಾಂತಿಗಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಲಕ್ಷ ವಿಷ್ಣು ಸಹಸ್ರನಾಮ ಹವನ ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಶ್ರೀ ಶಾರದಾ ಮಂಟಪ ಮತ್ತು ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಉಚಿತ ವೈದ್ಯಕೀಯ, ದಂತ, ನೇತ್ರ ತಪಾಸಣಾ ಶಿಬಿರಗಳನ್ನು ವಿವಿಧ ಸಂಘಟನೆಗಳ ಸಹಯೋಗದಿಂದ ಶ್ರೀ ಜನಾರ್ದನ ದೇವಸ್ಥಾನದ ಸಹಕಾರದಿಂದ ಪ್ರತಿ ವರ್ಷ ನಡೆಸಲಾಗುತ್ತಿದೆ. ದೇವಾಲಯದ ಹೊರಾವರಣದ ಬಯಲಲ್ಲಿ ವಿಪ್ರ ಯುವಕೂಟದ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ಕನ್ಯಾಡಿಯ ಯಕ್ಷ ಭಾರತಿ (ರಿ) ಸಹಯೋಗ ಹಾಗೂ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಸಹಕಾರದೊಂದಿಗೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಎರಡು ದಿನಗಳ ತೆಂಕು – ಬಡಗು – ಖಡಾ ಬಡಗು ಯಕ್ಷಗಾನ ಪ್ರದರ್ಶನ – ತಾಳಮದ್ದಳೆ – ವಿಚಾರಗೋಷ್ಠಿ – ಪ್ರಾತ್ಯಕ್ಷಿಕೆಗಳನ್ನೊಳಗೊಂಡ ಯಕ್ಷ ಸಂಭ್ರಮ ಕಾರ್ಯಕ್ರಮವನ್ನು ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಸಲು ಯೋಜಿಸಲಾಗಿದೆ.

ಕಳೆದ 3-4 ವರ್ಷಗಳಿಂದ ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ನೇತೃತ್ವದಲ್ಲಿ ಮಳೆಗಾಲದಲ್ಲಿ ಶ್ರೀ ಜನಾರ್ದನ ಸ್ವಾಮಿ ಯಕ್ಷಗಾನ ಚಿಕ್ಕಮೇಳ ಮನೆಮನೆ ತಿರುಗಾಟದಿಂದ ಧರ್ಮಸ್ಥಳ – ಉಜಿರೆ – ಬೆಳ್ತಂಗಡಿ ಪ್ರದೇಶದ ಹಿಂದೂ ಮನೆಗಳಲ್ಲಿ ಸಂಜೆ 6 ರಿಂದ ರಾತ್ರಿ 11 ರ ವರೆಗೆ ಕಿರು ಯಕ್ಷಗಾನ ಪೌರಾಣಿಕ ಪ್ರದರ್ಶನ ನೀಡುವ ಮೂಲಕ ಪೌರಾಣಿಕ ಯಕ್ಷಗಾನ ಕಲೆಯನ್ನು ಮನೆ ಮನೆಗೆ ಪರಿಚಯಿಸುತ್ತಿದೆ.

ಯು. ವಿಜಯರಾಘವ ಪಡುವೆಟ್ನಾಯ ಅನುವಂಶಿಕ ಆಡಳಿತ ಮೊಕ್ತೇಸರರು

LEAVE A REPLY

Please enter your comment!
Please enter your name here