ಮಹಾನಗರ : ಶ್ರೀ ಜನಾರ್ದನ ಭಜನ ಮಂದಿರ, ಜಪ್ಪು ಬಪ್ಪಾಲ್ ಮಂಗಳೂರು-2 ಇದರ 68ನೇ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರವು ಜೆ. ರಘುವೀರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.ಕಾರ್ಯದರ್ಶಿ ಜೆ. ನವೀನ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಉಮೇಶ್ ಕೊಟ್ಟಾರಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ
ಅನಂತರ ನಡೆದ ಚುನಾವಣೆಯಲ್ಲಿ ಪಯ್ಯಲ್ ಭಾಸ್ಕರ ಆಚಾರ್-ಗೌರವಾಧ್ಯಕ್ಷ, ಜೆ. ರಘುವೀರ್- ಅಧ್ಯಕ್ಷ, ಜೆ. ನವೀನ್ ಶೆಟ್ಟಿ- ಕಾರ್ಯದರ್ಶಿ, ಉಮೇಶ್ ಕೊಟ್ಟಾರಿ- ಕೋಶಾಧಿಕಾರಿ, ಸುನೀಲ್ಕುಮಾರ್, ಸತೀಶ್ ಆಚಾರ್- ಉಪಾಧ್ಯಕ್ಷರು, ಜೆ. ಪುಂಡಲೀಕ ಸುವರ್ಣ- ಮೇಲ್ವಿಚಾರಕ, ಉಮೇಶ್ ಬಿ.ಆರ್., ನವೀನ್ ಜೆ.- ಜತೆ ಕಾರ್ಯದರ್ಶಿಗಳನ್ನಾಗಿ ಆರಿಸಲಾಯಿತು.
ಬಳಿಕ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಪಾಯಲ್ ಮತ್ತು ನವ್ಯಾ ಹಾಗೂ ಅರ್ಚಕ ಬಾಲಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ಜೆ. ನವೀನ್ ಶೆಟ್ಟಿ ವಂದಿಸಿದರು.