ಕೆಯ್ಯೂರು : ಕೆಯ್ಯೂರು ಗ್ರಾಮದ ಮಾಡಾವು ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವ ಸ್ಥಾನದಲ್ಲಿ ಶ್ರೀ ಹೊಸಮ್ಮ ದೈವದ ನೇಮ
ಗುರುವಾರ ರಾತ್ರಿ ನಡೆಯಿತು.
ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ, ಕಳಶ ಪೂಜೆ, ಶ್ರೀ ನಾಗ ದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳಿಗೆ ತಂಬಿಲ, ಶ್ರೀ ವೆಂಕಟರಮಣ ದೇವರ ಸೇವೆ, ಮಧ್ಯಾಹ್ನ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ಕೆಯ್ಯೂರು ಶ್ರೀ ದುರ್ಗಾ ಭಜನ ಮಂಡಳಿ ಇವರಿಂದ ಭಜನ ಕಾರ್ಯ ಕ್ರಮ, ಭಂಡಾರ ತೆಗೆಯುವುದು, ಅನ್ನಸಂತ ರ್ಪಣೆ, ಅನಂತರ ಶ್ರೀ ಹೊಸಮ್ಮ ದೈವದ ನೇಮ, ಪ್ರಸಾದ ವಿತರಣೆ ನಡೆಯಿತು. ಎ. 6ರಂದು ಬೆಳಗ್ಗೆ ದೈವದ ಗಣಗಳಿಗೆ ಬಲಿ ಸೇವೆ ನಡೆಯಿತು.