Home ಧಾರ್ಮಿಕ ಸುದ್ದಿ ಶ್ರೀ ಹೊಸಮ್ಮ ದೈವದ ಹರಕೆ ನೇಮ

ಶ್ರೀ ಹೊಸಮ್ಮ ದೈವದ ಹರಕೆ ನೇಮ

1705
0
SHARE

ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ಶ್ರೀ ಹೊಸಮ್ಮ ದೈವಸ್ಥಾನ ಪಲ್ಲತ್ತಡ್ಕದಲ್ಲಿ ಶ್ರೀ ಹೊಸಮ್ಮ ದೈವದ ಹರಕೆಯ ನೇಮ ಎ. 12ರಂದು ನಡೆಯಿತು.

ಮಧ್ಯಾಹ್ನ ಶ್ರೀ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ 7. 30ಕ್ಕೆ ಭಂಡಾರ ತೆಗೆದು, ಕೆಯ್ಯೂರು ಶ್ರೀ ದುರ್ಗಾ ಭಜನ ಮಂಡಳಿಯವರಿಂದ ಭಜನೆ, ಬಳಿಕ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಶ್ರೀ ಹೊಸಮ್ಮ ದೈವದ ಹರಕೆಯ ನೇಮ ನಡೆಯಿತು. ಹರಕೆ ನೇಮದ ಸೇವಾರ್ಥಿ ಪುಣೆಯ ಹೊಟೇಲ್‌ ಉದ್ಯಮಿ ಶಿವರಾಮ ರೈ ಕೋಡಂಬು, ಸೌಮ್ಯಾ ಎಸ್‌. ರೈ ಮತ್ತು
ಮಕ್ಕಳು ಹಾಗೂ ಕುಟುಂಬಸ್ಥರು, ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನವಳಿಕೆ ಗುತ್ತು ಕಮಲಾಕ್ಷ ರೈ ಹಾಗೂ ಶ್ರೀ ಹೊಸಮ್ಮ ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಎಸ್‌.ಬಿ. ಜಯರಾಮ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಜಯಂತ ನಡುಬೈಲು, ಕುಟುಂಬದ ಹಿರಿಯರಾದ ರಾಜೀವಿ ಪೂಜಾರಿ ಮತ್ತು ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here