ಸುಳ್ಯ : ಇಲ್ಲಿನ ಬೃಂದಾವನ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ಪಯಸ್ವಿನಿ ತಟದ ಶ್ರೀ ಚೆನ್ನಕೇಶವ ದೇವರ ಜಳಕದ ಕಟ್ಟೆ ಬಳಿ ನಿರ್ಮಾಣಗೊಂಡ ನೂತನ ಶ್ರೀ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ಮಹೋತ್ಸವ ದೇರೆಬೈಲು ತಂತ್ರಿಗಳಾದ ಮುಕ್ಕೂರು ರಾಘವೇಂದ್ರಪ್ರಸಾದ್ ಶಾಸ್ತ್ರೀ ಅವರ ಉಪಸ್ಥಿತಿಯಲ್ಲಿ ಗುರುವಾರ ಆರಂಭಗೊಂಡಿತು.
ಪೂರ್ವಾಹ್ನ ಮಹಾಸಂಕಲ್ಪ, ಸ್ವಸ್ತಿ ಪುಣ್ಯಾಹವಾಚನ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ದೇವನಾಂದಿ ಸಮಾರಾಧನೆ, ಮಹಾಗಣಪತಿ ಹೋಮ, ತುಳಸಿ ಪ್ರತಿಷ್ಠೆ, ಸಪ್ತಶುದ್ಧಿ ಪ್ರಕ್ರಿಯೆಗಳು, ಪ್ರಸಾದ ವಿತರಣೆ, ರಾತ್ರಿ 7ರಿಂದ ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ. ವಾಸ್ತು ಪೂಜಾ ಬಲಿ, ದಿಕ್ಪಾಲಕ ಬಲಿ, ಪ್ರಸಾದ ವಿತರಣೆ ನಡೆಯಿತು.
ವೈದಿಕ ಕಾರ್ಯಕ್ರಮದ ತಂತ್ರಿಗಳಾದ ದೇರೆಬೈಲು ರಾಘವೇಂದ್ರಪ್ರಸಾದ್ ಶಾಸ್ತ್ರಿ ಮುಕ್ಕೂರು ಅವರನ್ನು ಪೂರ್ಣ ಕುಂಭ ದೊಂದಿಗೆ ಸ್ವಾಗತಿಸಲಾಯಿತು.
ಇಂದಿನ ಕಾರ್ಯಕ್ರಮ
ಎ. 20ರಂದು ಬೆಳಗ್ಗೆ 8ರಿಂದ ವೈದಿಕ ಕಾರ್ಯಕ್ರಮ, ಮಹಾಗಣಪತಿ ಹೋಮ, ಪವಮಾನ ಪ್ರಾಯಶ್ಚಿತ್ತ ಹೋಮ, ನವಗ್ರಹ ಪೂಜೆ, ನವಗ್ರಹ ಶಾಂತಿ, ದಾನಾದಿಗಳು, ಪ್ರಸಾದ ವಿತರಣೆ,ರಾತ್ರಿ 7ರಿಂದ ಭೂವರಾಹ ಹೋಮ, ದುರ್ಗಾ ನಮಸ್ಕಾರ ಪೂಜೆ, ಮಹಾ ಸುದರ್ಶನ ಹೋಮ ನಡೆಯಲಿದೆ.
ಅಪರಾಹ್ನ 4ರಿಂದ ಸುಳ್ಯ ಮಹಿಳಾ ಪರಿಷತ್ ಸದಸ್ಯರಿಂದ ಭಜನೆ, ಪುತ್ತೂರು ವಿದುಷಿ ರೂಪಶ್ರೀ ಮತ್ತು ಸಂಹಿತಾ ಬಳಗದವರಿಂದ ಭಕ್ತಿ ಸಂಗೀತ, ಸುಳ್ಯ ಶಿವಳ್ಳಿ ಸಂಪನ್ನದ ವಿದ್ಯಾರ್ಥಿಗಳಿಂದ ವೇದಘೋಷ, ರಾತ್ರಿ 7ರಿಂದ ರಾಘವೇಂದ್ರ ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳಿಕೃಷ್ಣ ಡಿ.ಆರ್. ಅಧ್ಯಕ್ಷತೆ ಯಲ್ಲಿ ಧಾರ್ಮಿಕ ಸಭೆ ಜರಗಲಿದೆ.