Home ಧಾರ್ಮಿಕ ಸುದ್ದಿ ಶ್ರೀ ಗುರು ರಾಘವೇಂದ್ರ ಮಠ: ಪ್ರತಿಷ್ಠಾ ಮಹೋತ್ಸವ

ಶ್ರೀ ಗುರು ರಾಘವೇಂದ್ರ ಮಠ: ಪ್ರತಿಷ್ಠಾ ಮಹೋತ್ಸವ

1558
0
SHARE

ಸುಳ್ಯ: ಇಲ್ಲಿನ ಶ್ರೀ ಗುರು ರಾಘವೇಂದ್ರ ಮಠದ ಪ್ರಥಮ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಸೋಮವಾರ ವೇದಮೂರ್ತಿ ಹರಿ ಎಳಚಿತ್ತಾಯ ನೇತೃತ್ವದಲ್ಲಿ ನಡೆಯಿತು.

ಬೆಳಗ್ಗೆ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, ಶ್ರೀ ರಾಘವೇಂದ್ರ ಅಷ್ಟಾಕ್ಷರಿ ಮಂತ್ರ ಹೋಮ, ಮಧ್ಯಾಹ್ನ ಅಲಂಕಾರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಆಶ್ಲೇಷ ಬಲಿ ಪೂಜೆ, ರಾತ್ರಿ ರಂಗಪೂಜೆ ನೆರವೇರಿತು. ಬಳಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಭಜನೆ, ಭಕ್ತಿಗಾನ ಹಾಗೂ ರಾತ್ರಿ ಧಾರ್ಮಿಕ ಸಭೆ, ಶಿಕ್ಷಕರ ಯಕ್ಷಗಾನ ಒಕ್ಕೂಟದವರಿಂದ ರತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಬೃಂದಾವನ ಸೇವಾ ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಶ್ರೀಕೃಷ್ಣ ಎಂ.ಎನ್‌., ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಮುರಳಿಕೃಷ್ಣ ಡಿ.ಆರ್‌., ಟ್ರಸ್ಟಿ ಪ್ರಕಾಶ ಮೂಡಿತ್ತಾಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here