Home ಧಾರ್ಮಿಕ ಸುದ್ದಿ ಶ್ರೀ ಗೋವಿಂದ ದೇವಸ್ಥಾನ ಖಂಬದಕೋಣೆ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

ಶ್ರೀ ಗೋವಿಂದ ದೇವಸ್ಥಾನ ಖಂಬದಕೋಣೆ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

1895
0
SHARE

ಬೈಂದೂರು: ಶ್ರೀಗೋವಿಂದ ದೇವಸ್ಥಾನ ಖಂಬದಕೋಣೆ ಇದರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಕುಂಭಾಭಿಷೇಕದ ಧಾರ್ಮಿಕ ಸಭಾ ಕಾರ್ಯಕ್ರಮ ದೇವಸ್ಥಾನದ ಸಭಾ ವೇದಿಕೆಯಲ್ಲಿ ನಡೆಯಿತು. ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸ್ವಾಮೀಜಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಆಶೀರ್ವಚನಗೈದು ಮಾತನಾಡಿದ ಅವರು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಪಾರದರ್ಶಕವಾದ ಬದುಕು ಭಗವಂತನಿಗೆ ಪ್ರಿಯವಾಗುತ್ತದೆ. ಶ್ರದ್ಧಾ ಭಕ್ತಿಯ ಪೂಜೆಗಳು ಮೋಕ್ಷವನ್ನು ನೀಡುತ್ತವೆ. ಐತಿಹಾಸಿಕ ಹಿನ್ನೆಲೆಯಿರುವ ಗೋವಿಂದ ದೇವಸ್ಥಾನದ ಜೀರ್ಣೋದ್ಧಾರ ಈ ಭಾಗದ ಜನರಿಗೆ ಇನ್ನಷ್ಟು ಒಳಿತು ಮಾಡಲಿದೆ ಎಂದರು.

ಶ್ರೀಗೋವಿಂದ ದೇವಸ್ಥಾನದ ಖಂಬದ ಕೋಣೆ ಅಧ್ಯಕ್ಷ ಗೋವಿಂದ ದೇವಾಡಿಗ ಗೋಳಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆನೆಗುಡ್ಡೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಬೈಂದೂರು ಶಾಸಕ ಹಾಗೂ ಕ.ರಾ.ರ.ಸಾ. ಸಂಸ್ಥೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ತಾ.ಪಂ. ಸದಸ್ಯ ಮಹೇಂದ್ರ ಪೂಜಾರಿ, ಜೀರ್ಣೋದ್ಧಾರ ಸಮಿತಿ ಸದಸ್ಯ ಮಂಜುನಾಥ ಕೆ.ಜಿ., ಉಸ್ತುವಾರಿ ಸಮಿತಿ ಅಧ್ಯಕ್ಷ ಎಚ್‌. ವಿಜಯ ಕುಮಾರ್‌ ಶೆಟ್ಟಿ, ಅರ್ಚಕ ಕೆ. ತಿಮ್ಮಪ್ಪಯ್ಯ ಭಟ್‌, ತಿಮ್ಮಯ್ಯ ದೇವಾಡಿಗ, ಮಂಜುನಾಥ ದೇವಾಡಿಗ, ದತ್ತಾತ್ರೇಯ ಭಟ್‌ ಉಪಸ್ಥಿತರಿದ್ದರು. ಸುಂದರ ದೇವಾಡಿಗ ಸ್ವಾಗತಿಸಿದರು. ಕೃಷ್ಣ ಕೆ.ಜಿ. ನಿರ್ವಹಿಸಿದರು. ದಿವ್ಯಾ ಭಟ್‌ ವಂದಿಸಿದರು.

LEAVE A REPLY

Please enter your comment!
Please enter your name here