Home ಧಾರ್ಮಿಕ ಸುದ್ದಿ ಶ್ರೀ ಗೌರೀಶಂಕರ ದೇಗುಲ: ದೃಢಕಲಶ

ಶ್ರೀ ಗೌರೀಶಂಕರ ದೇಗುಲ: ದೃಢಕಲಶ

355
0
SHARE

ಪಡುಪಣಂಬೂರು: ಇಲ್ಲಿನ ಹೊಗೆಗುಡ್ಡೆ ಶ್ರೀ ಗೌರೀಶಂಕರ ದೇವಸ್ಥಾನದಲ್ಲಿ ಜರಗಿದ ಬ್ರಹ್ಮಕಲಶೋತ್ಸವ ಪ್ರಯುಕ್ತ ಜೂ. 16ರಂದು ದೃಢಕಲಶ ನಡೆಯಿತು. ದೇಗುಲದ ಆಡಳಿತ ಮೊಕ್ತೇಸರ ಎಚ್‌. ಗಣಪತಿ ಭಟ್‌ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಶ್ರೀಕಾಂತ್‌ ಭಟ್‌ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಾನಗಳನ್ನು ನಡೆಸಲಾಯಿತು. ಮಧ್ಯಾಹ್ನ ಭಕ್ತರ ಸಮ್ಮುಖದಲ್ಲಿ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಕೊಲ್ನಾಡು ಗುತ್ತು ರಾಮಚಂದ್ರ ನಾಯಕ್‌, ಉಪಾಧ್ಯಕ್ಷ ವಿದ್ಯಾಧರ ಶೆಟ್ಟಿ ಕೋಲಾ°ಡುಗುತ್ತು, ಕದ್ರಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ವಿಜಯಕುಮಾರ್‌ ಶೆಟ್ಟಿ, ಸಮಿತಿಯ ಮಾಧವ ಶೆಟ್ಟಿ, ಹೇಮನಾಥ ಶೆಟ್ಟಿಗಾರ್‌, ಪಿಸಿಎ ಬ್ಯಾಂಕ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
ಉಮಾನಾಥ ಶೆಟ್ಟಿಗಾರ್‌, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here