Home Uncategorized ನಾಳ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ: ಅರ್ಧ ಏಕಾಹ ಭಜನೆ

ನಾಳ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ: ಅರ್ಧ ಏಕಾಹ ಭಜನೆ

1655
0
SHARE

ಬೆಳ್ತಂಗಡಿ : ನಾಳ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ನಾಳ ಇದರ ವತಿಯಿಂದ ನಾಳ ದೇವಸ್ಥಾನ ದಲ್ಲಿ ಶನಿವಾರ ಜಿಲ್ಲೆಯ ಆಯ್ದ ಭಜನ ತಂಡಗಳಿಂದ ಅರ್ಧ ಏಕಾಹ ಭಜನ ಕಾರ್ಯಕ್ರಮ ಆರಂಭಗೊಂಡಿತು.

ನಾಳ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಅಸ್ರಣ್ಣ ಅವರು ದೀಪ ಪ್ರಜ್ವಲನ ಮಾಡುವ ಮೂಲಕ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ಮಜಲು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಭಜನಾ ಮಂಡಳಿ ಅಧ್ಯಕ್ಷ ಶಶಿಧರ ಶೆಟ್ಟಿ ಹೀರ್ಯ, ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಸದಸ್ಯರು, ಭಜನ ಮಂಡಳಿಯ ಪದಾಧಿಕಾರಿಗಳು, ಹಿರಿಯರಾದ ನಾರಾ ಯಣ ಆಚಾರ್ಯ ಗೇರುಕಟ್ಟೆ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here