ಕಡಬ : ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 58ನೇ ವರ್ಷದ ಏಕಾಹ ಭಜನ ಮಹೋತ್ಸವ ಶುಕ್ರವಾರ ಮುಂಜಾನೆ ಆರಂಭಗೊಂಡಿತು. ಪುರೋಹಿತ ಕೆಂಚಭಟ್ರೆ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ನಡೆದ ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಅವರು ದೀಪ ಪ್ರಜ್ವಲನೆ
ಮಾಡುವ ಮೂಲಕ ಭಜನೆಗೆ ಚಾಲನೆ ನೀಡಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಏಕಾಹ ಭಜನ ಸಮಿತಿಯ ಅಧ್ಯಕ್ಷ ಪೆಲತ್ತೋಡಿ ಚಂದ್ರಶೇಖರ ಕರ್ಕೇರ, ಕೋಶಾಧಿಕಾರಿ ನೀಲಾವತಿ ಶಿವರಾಮ್, ಉಪಾಧ್ಯಕ್ಷ ಯಶೋಧರ ಗೌಡ ಪೂವಳ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕಳಾರ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಕಡಬ ಎಸ್ಐ ಪ್ರಕಾಶ್ ದೇವಾಡಿಗ, ಸಿಬಂದಿ ಸತೀಶ್, ಸರಸ್ವತೀ ವಿದ್ಯಾಲಯದ ಅಧ್ಯಕ್ಷ ರವಿರಾಜ ಶೆಟ್ಟಿ ಕಡಬ, ಕೋಶಾಧಿಕಾರಿ ಲಿಂಗಪ್ಪ ಜೆ., ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್, ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ., ಪ್ರಮುಖರಾದ ಜಿನ್ನಪ್ಪ ಸಾಲಿಯಾನ್, ಅಶೋಕ್ ಆಳ್ವ ಬೆದ್ರಾಜೆ, ಎಎಸ್ಐ ಯೋಗೀಂದ್ರ, ಉಪನ್ಯಾಸಕ ವಿಶ್ವನಾಥ ರೈ ಪೆರ್ಲ, ಸೀತಾರಾಮ ಗೌಡ ಎ., ಸರೋಜಿನಿ ಆಚಾರ್ಯ, ಸಾಯಿಪ್ರಸಾದ್ ಪೈ, ಹರೀಶ್ ಉಂಡಿಲ, ಪ್ರಕಾಶ್ ಎನ್. ಕೆ., ಯಶೋದಾ ರವಿರಾಜ ಶೆಟ್ಟಿ, ಆನಂದ ಆಂಗಡಿಮನೆ ಹಾಜರಿದ್ದರು.
ಶ್ರೀ ದುರ್ಗಾಂಬಿಕಾ ಭಜನ ಮಂಡಳಿಯ ಸದಸ್ಯರು ಭಜನ ಸೇವೆ ನೆರವೇರಿಸಿದರು. ಸಂಜೆ ದೀಪಾರಾಧನೆ ನೆರವೇರಿತು. ರಾತ್ರಿ ಜರಗಿದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಗಳನ್ನು ಗಣಪತಿ ದೇವಸ್ಥಾನದಿಂದ ಪೂರ್ಣಕುಂಭ ಸ್ವಾಗತದ ಮೂಲಕ ರಾಜಬೀದಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಶ್ರೀ ದೇವರಿಗೆ ಉಲ್ಪೆ ಸಮರ್ಪಣೆ ನಡೆಯಿತು. ಭಕ್ತರಿಗೆ ಸುಬ್ರಹ್ಮಣ್ಯ ಮಠದ ವತಿಯಿಂದ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಜೇಸಿಐ ಕಡಬ ಕದಂಬ ಘಟಕದ ಸದಸ್ಯರು ಅಡಿಗಾ ಟಿವಿಎಸ್ ಸಂಸ್ಥೆಯ ಸಹಯೋಗದೊಂದಿಗೆ ಉಚಿತವಾಗಿ ಮಜ್ಜಿಗೆ ವಿತರಿಸಿದರು. ಉತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುದ್ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.