Home ಧಾರ್ಮಿಕ ಸುದ್ದಿ ಶ್ರೀ ಧರ್ಮಸ್ಥಳ: ಮಹಾ ಮಸ್ತಕಾಭಿಷೇಕ ಸಂಭ್ರಮಕ್ಕೆ ಚಾಲನೆ

ಶ್ರೀ ಧರ್ಮಸ್ಥಳ: ಮಹಾ ಮಸ್ತಕಾಭಿಷೇಕ ಸಂಭ್ರಮಕ್ಕೆ ಚಾಲನೆ

908
0
SHARE

ಬೆಳ್ತಂಗಡಿ : ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕಕ್ಕೆ ಶನಿವಾರ ಅದ್ದೂರಿಯ ಚಾಲನೆ ದೊರಕಿದ್ದು, ರಾತ್ರಿ ಹೊತ್ತು ಕ್ಷೇತ್ರ ವಿಶೇಷ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ.

ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿ, ಸ್ಥಳೀಯ ವಿವಿಧ ಕಟ್ಟಡಗಳು, ವಸತಿ ಗೃಹ ಗಳು, ರಾಜಬೀದಿಗಳು ಪೂರ್ತಿ ವಿದ್ಯುತ್‌ ದೀಪಗ ಳಿಂದ ಅಲಂಕೃತಗೊಂಡಿದ್ದು, ಮಹಾ ಮಸ್ತಕಾಭಿಷೇಕಕ್ಕೆ ವಿಶೇಷ ಕಳೆ ಬಂದಿದೆ.

ಬಿಗಿ ಪೊಲೀಸ್‌ ಬಂದೋಬಸ್ತ್

ಶನಿವಾರ ಕ್ಷೇತ್ರದ ಜನಕಲ್ಯಾಣ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಸಹಿತ ಕೇಂದ್ರ- ರಾಜ್ಯ ಸಚಿವರು, ಗಣ್ಯರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್‌ ಸಿಬಂದಿ ಜತೆಗೆ ಅಧಿಕಾರಿಗಳು ಸಂಚಾರ ವ್ಯವಸ್ಥೆಯನ್ನು ಸಮರ್ಪಕಗೊಳಿಸಿದರು. ಕ್ಷೇತ್ರದ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಒಟ್ಟು 200 ಗೃಹರಕ್ಷಕ ದಳ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದು, 150 ಮಂದಿ ಜಿಲ್ಲೆಯಿಂದ, 50 ಮಂದಿ ಉಡುಪಿ ಜಿಲ್ಲೆಯಿಂದ ಭಾಗವಹಿಸುತ್ತಿದ್ದಾರೆ.

ಶನಿವಾರ ಪ್ರಾತಃಕಾಲ ಭಗವಾನ್‌ ಶ್ರೀ ತೀರ್ಥಂಕರರಿಗೆ ಪಂಚಾಮೃತಾಭಿಷೇಕದ ಮೂಲಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ದೊರಕಿತು. ಮಹಾಪೂಜೆ ನಡೆದು ಬಳಿಕ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಬಾಹು ಬಲಿ ಬೆಟ್ಟದಲ್ಲಿ ಇಂದ್ರ ಪ್ರತಿಷ್ಠೆ, ಬೆಳಗ್ಗೆ 8.45ಕ್ಕೆ ತೋರಣ ಮುಹೂರ್ತ ನಡೆಯಿತು.

ಬಳಿಕ ವಿಮಾನ ಶುದ್ಧಿ, 12.35ಕ್ಕೆ ಮುಖ ವಸ್ತ್ರ ಶ್ರೀ ಬಾಹುಬಲಿಗೆ 24 ಕಲಶ ಗಳಿಂದ ಪಾದಾಭಿಷೇಕ ನಡೆಯಿತು. ಮಧ್ಯಾಹ್ನ ನಾಂದಿ ಮಂಗಲ ಪೂಜಾ ವಿಧಾನ, ಸಾಯಂ ಕಾಲ ಮೃತ್ತಿಕಾ ಸಂಗ್ರಹಣೆ, ಯಜ್ಞ ಶಾಲಾ ಪ್ರವೇಶ, ಅಂಕುರಾರ್ಪಣ ವಿಧಾನ, ಮಹಾ ಮಂಗಳಾರತಿ ನಡೆಯಿತು. ಭಗವಾನ್‌ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕ ಮುಹೂರ್ತಕ್ಕೆ ಅವಿಭಜಿತ ಜಿಲ್ಲೆಯ ಎಲ್ಲ ಬಸದಿಗಳಿಂದ ಪ್ರಸಾದ ತಂದು ಪಾದಾಭಿಷೇಕ ನಡೆಸಲಾಯಿತು.

ಲಲಿತಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಡಿ. ಸುರೇಂದ್ರಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರಕುಮಾರ್‌, ಡಿ. ರಾಜೇಂದ್ರಕುಮಾರ್‌, ನೀತಾ ರಾಜೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌, ಅಮಿತ್‌ಕುಮಾರ್‌, ಪದ್ಮಲತಾ, ಡಾ| ನಿರಂಜನ್‌ ಉಪಸ್ಥಿತರಿದ್ದರು.

ಮಹಾ ಮಸ್ತಕಾಭಿಷೇಕದ ಪೂಜಾ ಕಾರ್ಯಕ್ರಮಗಳ ಭಾಗವಾಗಿ ಶನಿವಾರ ಬೆಳಗ್ಗೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿ ಬೆಟ್ಟಕ್ಕೆ ವಿಶೇಷ ಅಗ್ರೋದಕ ಮೆರವಣಿಗೆ ನಡೆಯಿತು. ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರಜೀಮುನಿ ಮಹಾರಾಜರು, ಪರಮಪೂಜ್ಯ ಆಚಾರ್ಯ ಶ್ರೀ ವಾತ್ಸಲ್ಯ ವಾರಿಧಿ 108 ಪುಷ್ಪದಂಥ ಸಾಗರ ಮುನಿಮಹಾರಾಜರು, ಕಾರ್ಕಳ ದಾನ ಶಾಲೆಯ ಧ್ಯಾನ ಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್‌, ಸಂಚಾಲಕ ಡಿ. ಹರ್ಷೇಂದ್ರಕುಮಾರ್‌, ದಿಗಂಬರ ಮುನಿಗಳು, ಆರ್ಯಿಕಾ ಮಾತಾಜಿಯವರು ಭಾಗವಹಿಸಿದರು.

ವಿಶೇಷ ಅಗ್ರೋದಕ ಮೆರವಣಿಗೆ

ವಿದ್ಯುತ್‌ ದೀಪಾಲಂಕಾರಗಳಿಂದ ಧರ್ಮಸ್ಥಳ ಕ್ಷೇತ್ರ ಕಂಗೊಳಿಸುತ್ತಿದೆ. ಅಗ್ರೋದಕ ಮೆರವಣಿಗೆ ನಡೆಯಿತು.

ಸತೀಶ್‌ ಇರಾ

LEAVE A REPLY

Please enter your comment!
Please enter your name here