ಮಹಾನಗರ: ನವರಾತ್ರಿ ಮಹೋತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ರವಿವಾರವೂ ವಿವಿಧ ಪೂಜಾ ವಿಧಿಗಳು ನಡೆದವು. ರಜಾ ದಿನವಾದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕುದ್ರೋಳಿ ದೇವಸ್ಥಾನದಲ್ಲಿ ಬೆಳಗ್ಗೆ 10 ಗಂಟೆಗೆ ದುರ್ಗಾ ಹೋಮ, ಮಧ್ಯಾಹ್ನ 12ಕ್ಕೆ ಪುಷ್ಪಾಲಂಕಾರ ಮಹಾಪೂಜೆ (ಲಲಿತಾ ಪಂಚಮಿ), ರಾತ್ರಿ 7 ಗಂಟೆಯಿಂದ 9ರವರೆಗೆ ಭಜನೆ, ರಾತ್ರಿ 9 ಗಂಟೆಯಿಂದ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ಜರಗಿದವು.
ಅದೇ ರೀತಿ ಪ್ರಭಾಕರ ತಣ್ಣೀರುಬಾವಿ ಇವರ ಸಪ್ತಸ್ವರ ಆರ್ಕೆಸ್ಟ್ರಾ ತಂಡದಿಂದ ಭಕ್ತಿ ಗಾನ ರಸಮಂಜರಿ, ವಿದುಷಿ ರೇಷ್ಮಾ ನಿರ್ಮಲ್ ಭಟ್ ಅವರ ಶಿಷ್ಯೆ ಶ್ರೀರಕ್ಷಾ ಎಸ್.
ಎಚ್. ಮತ್ತು ತಂಡದಿಂದ ನೃತ್ಯ ವೈಭವ, ಡಾ| ಎಪಿಜೆ ಅಬ್ದುಲ್ ಕಲಾಂ ಲೈಫ್ಟೈಮ್ ಹಾಗೂ ಹಲವಾರು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ| ಕೆ. ಶಶಿಕುಮಾರ್ ವಾರಾಣಸಿ ಉತ್ತರಪ್ರದೇಶ ಮತ್ತು ತಂಡದ ವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ವಯೋಲಿನ್-ಟಿ.ಎಸ್. ಶಶಿಧರ್, ಮೃದಂಗಮ್-ಬಾಲಚಂದ್ರ ಭಾಗವತ್ ಅವರಿಂದ ಕಾರ್ಯಕ್ರಮ ನಡೆಯಿತು.
ಅದೇ ರೀತಿ ಮಹತೋಭಾರ ಶ್ರೀ ಮಂಗಳಾ ದೇವಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮೂಲಾ ನಕ್ಷತ್ರ, ರಾತ್ರಿ ಉತ್ಸವಾರಂಭ ನಡೆಯಿತು. ಯಕ್ಷ ಮಂಜುಳಾ ಕದ್ರಿ ಮಂಗಳೂರು ಇವರಿಂದ ಮಹಿಳಾ ತಾಳಮದ್ದಳೆ, ಭಜನೆ, ಭಕ್ತಿಗಾನ ವೈಭವ, ನೃತ್ಯವೈವಿಧ್ಯ ಕಾರ್ಯಕ್ರಮಗಳು ಜರಗಿದವು.