ಮಹಾನಗರ: ಸೂಟರ್ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ವಠಾರದಲ್ಲಿ ನಿರ್ಮಾಣವಾಗುವ ಶ್ರೀ ಬಬ್ಬುಸ್ವಾಮಿ ರಂಗಮಂದಿರ ಹಾಗೂ ದೈವಸ್ಥಾನದ
ಭದ್ರತಾ ಕೊಠಡಿಗೆ ಮಾಜಿ ಶಾಸಕ ಜೆ.ಆರ್. ಲೋಬೋ ಅವರು ಶಿಲಾನ್ಯಾಸ ನೆರವೇರಿಸಿದರು.
ಮನಪಾ ಕಾರ್ಪೊರೇಟರ್ ಅಪ್ಪಿ ಎಸ್. ಅವರ ಅನುದಾನದಲ್ಲಿ ಸುಮಾರು 8ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ ಹಾಗೂ ದೈವಸ್ಥಾನದ ಭದ್ರತಾ ಕೊಠಡಿ ನಿರ್ಮಾಣವಾಗಲಿದೆ.
ಈ ಸಂದರ್ಭ ವೇ| ಮೂ| ಭಾಸ್ಕರ್ ಐತಾಳ್ ಅವರ ಪೌರೋಹಿತ್ಯದಲ್ಲಿ ಶಿಲಾನ್ಯಾಸದ ವಿಧಿ ವಿಧಾನಗಳನ್ನು ನೆರವೇರಿ ಸಲಾಯಿತು. ದೈವಸ್ಥಾನದ ಗುರಿಕಾರರಾದ
ಎಸ್. ರಾಘವೇಂದ್ರ, ಕಾರ್ಪೊರೇಟರ್ ಅಪ್ಪಿ ಎಸ್., ಗೌರವ ಸಲಹೆಗಾರ ಕೆ. ಪಾಂಡುರಂಗ, ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್ಚಂದ್ರ ಅಂಚನ್, ಖಜಾಂಚಿ ಎಸ್. ನವೀನ್, ಬಬ್ಬುಸ್ವಾಮಿ ಪಾತ್ರಿ ಎಸ್. ಗಣೇಶ್, ಅರ್ಚಕ ಜಯ, ದೈವಸ್ಥಾನದ ಸದಸ್ಯರಾದ ಪವಿತ್ರಾ, ಬಿ.ವಿಶ್ವನಾಥ್ ಸಾಲ್ಯಾನ್, ಮೋಹನ್, ಮೋಹನ್ ದಾಸ್, ಉಮಾ ಪ್ರಸಾದ್, ಬಿ.ಗಣೇಶ್, ಜನಾರ್ದನ, ಪ್ರವೀಣ್, ರಾಹುಲ್, ರಂಜಿತ್, ತಿಲಕ್ರಾಜ್ ಉಪಸ್ಥಿತರಿದ್ದರು.