Home ಧಾರ್ಮಿಕ ಸುದ್ದಿ ಶ್ರೀ ಅಮೃತೇಶ್ವರ ದೇವಸ್ಥಾನ: ಹರಿಕಥಾ ಸಪ್ತಾಹ

ಶ್ರೀ ಅಮೃತೇಶ್ವರ ದೇವಸ್ಥಾನ: ಹರಿಕಥಾ ಸಪ್ತಾಹ

978
0
SHARE
'ಹರಿಕಥಾ ಸಪ್ತಾಹ ಭಾವಧಾರೆ'ಯನ್ನು ಉದ್ಘಾಟಿಸಲಾಯಿತು.

ಮಹಾನಗರ : ದೇವಸ್ಥಾನದಲ್ಲಿ ಸತ್ಸಂಗಗಳು ನಡೆದಾಗ ಭಗವಂತನು ಸಂತೃಪ್ತನಾಗಿ ಜಗತ್ತು ಸುಭಿಕ್ಷವಾಗಿ ನಡೆಯಲು ಸಾಧ್ಯ. ಸತ್ಕಾರ್ಯಗಳಿಂದ ಜನರ ಸಂಸ್ಕಾರ ವೃದ್ಧಿಯಾಗುತ್ತದೆ ಎಂದು ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್‌ ಹೇಳಿದರು. ದೇವಸ್ಥಾನದ ಆಶ್ರಯದಲ್ಲಿ ಹರಿಕಥಾ ಸತ್ಸಂಗ ಸಮಿತಿಯ 4ನೇ ವರ್ಷದ ‘ಹರಿಕಥಾ ಸಪ್ತಾಹ ಭಾವಧಾರೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೇಯರ್‌ ಭಾಸ್ಕರ್‌ ಕೆ., ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಪೆಲತ್ತಡಿ, ಕಾರ್ಪೊರೇಟರ್‌
ಹೇಮಲತಾ ರಘು ಸಾಲ್ಯಾನ್‌, ವಿಶ್ವಹಿಂದೂ ಪರಿಷತ್‌ ಅಧ್ಯಕ್ಷ ಜಗದೀಶ್‌ ಶೇಣವ, ಉದ್ಯಮಿ ಪ್ರವೀಣ್‌ ಶೆಟ್ಟಿ ಬೆಳ್ಳಿಬೆಟ್ಟು ಗುತ್ತು, ಕಲ್ಲುಡೇಲು ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗರಾಜ ರೈ ತಿಮಿರಿಗುತ್ತು, ನೋಟರಿ ಉಮೇಶ್‌ ಶೆಟ್ಟಿ ಹೊಸಲಕ್ಕೆ ಮುಖ್ಯ ಅತಿಥಿಗಳಾಗಿದ್ದರು. ಸಂಘಟಕ ಶರತ್‌ ಶೆಟ್ಟಿ ಪಡುಪಳ್ಳಿ ವಂದಿಸಿದರು.

ಕಲ್ಲುಡೇಲು ಶ್ರೀ ಸದಾಶಿವ ಭಜನ ಮಂಡಳಿಯವರ ಭಜನೆ ಹಾಗೂ ಸ್ಯಾಕ್ಸ್‌ಫೋನ್‌ ವಾದಕ ನಾರಾಯಣ ಜೋಗಿಯವರ ಸಂಗೀತ ಸಪ್ತಸ್ವರ ಜರಗಿತು. ಕಲಾರತ್ನ ಶಂನಾಡಿಗ ಅವರಿಂದ ‘ಯೋಗ ಕ್ಷೇಮ ವಹಾಮ್ಯಹಮ್‌’ ಹರಿಕಥೆ ಜರಗಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಐಲ ಹಾಗೂ ಜಗದೀಶ್‌ ಉಪ್ಪಳ ಸಹಕರಿಸಿದರು. ನಾಗೇಶ್‌ ಕೋಟ್ಯಾನ್‌,
ಕಿರಣ್‌ ಪಕ್ಕಳ ಪೆರ್ಮಂಕಿ ಗುತ್ತು, ಕಿಶೋರ್‌ ಶೆಟ್ಟಿ ಬೊಂಡಂತಿಲ, ಜಯರಾಮ್‌ ಜೆ. ಶೆಟ್ಟಿ ಸಹಕರಿಸಿದರು.

LEAVE A REPLY

Please enter your comment!
Please enter your name here