ಸುರತ್ಕಲ್ : ದೊಡ್ಡಯ್ಯ ಅಂಚನ್ ಸ್ಥಾಪಿಸಿ ಪೂಜಿಸಿದ ಶ್ರೀ ಆದಿಶಕ್ತಿ ದುರ್ಗಾ ಪರಮೇಶ್ವರೀ ದೇವಸ್ಥಾನ ಈಗ ಊರ ಹತ್ತು ಸಮಸ್ತರ ಸಹಕಾರದಿಂದ ಮುನ್ನಡೆದು, ಸಮಾಜಮುಖೀ ಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಕಟೀಲಿನ ವೇ| ಮೂ| ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ಕಾಟಿಪಳ್ಳ ಮೂರನೇ ವಿಭಾಗದಲ್ಲಿರುವ ಆದಿಶಕ್ತಿ ದುರ್ಗಾಪರಮೇಶ್ವರೀ ಸಭಾ ಭವನ ದೊಡ್ಡಯ್ಯ ಅಂಚನ್ ವೇದಿಕೆ ಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜೋತಿಷಿ ನಾಗೇಂದ್ರ ಭಾರದ್ವಾಜ್ ಮಾತನಾಡಿ, ಸಮಾಜದ ಭಕ್ತರಿಗೆ ಶ್ರದ್ಧಾಕೇಂದ್ರ ಎಷ್ಟು ಮುಖ್ಯವೋ, ಅಂತೆಯೇ ಭಕ್ತರ ಅಗತ್ಯಕ್ಕನುಗುಣವಾಗಿ ಸಮುದಾಯ ಭವನದ ಅಗತ್ಯವನ್ನು ಮನಗಂಡು ನಿರ್ಮಿಸಿ ಈ ಆದಿಶಕ್ತಿ ದುರ್ಗಾ ಪರಮೇಶ್ವರೀ ಸಭಾಭವನ ದೊಡ್ಡಯ್ಯ ಅಂಚನ್ ವೇದಿಕೆಯನ್ನು ಲೋಕಾರ್ಪಣೆ ಮಾಡಲು ಸಹಕರಿಸಿದ ಸರ್ವ ಭಕ್ತರ ಶ್ರಮ ಶ್ಲಾಘನೀಯ ಎಂದರು.
ಶಾಸಕ ಮೊದಿನ್ ಬಾವಾ ಉಪ ಸ್ಥಿತರಿದ್ದರು. ಸಭಾಭವನದ ನಿರ್ಮಾಣದ ಹೊಣೆಹೊತ್ತ ಹರೀಶ್ ಐತಾಳ್ ಮುಕ್ಕ, ಮಾಧವ ದೇವಾಡಿಗ ಕೃಷ್ಣಾಪುರ, ರಾಜೇಶ್ ಹಳೆಯಂಗಡಿ, ಐತಪ್ಪ ಅಮೀನ್ ಅವರನ್ನು ಅರ್ಚಕ ರಾಘವೇಂದ್ರ ಭಟ್ ಮತ್ತು ಗೌರವಿಸಲಾಯಿತು.
ನ್ಯಾಯವಾದಿ ಸಂತೋಷ್ ಐತಾಳ್, ಲಕುಮಿ ತಂಡದ ವ್ಯವಸ್ಥಾಪಕ ಕಿಶೋರ್ ಡಿ. ಶೆಟ್ಟಿ, ಎಂ. ಸದಾಶಿವ, ಶಿವರಾಮ್ ಅಮೀನ್, ಮನಪಾ ಸದಸ್ಯ ಬಶೀರ್ ಅಹಮ್ಮದ್, ಲಕ್ಷ್ಮೀನಾರಾಯಣ, ಪುರು ಷೋತ್ತಮ ಬಂಗೇರ, ಕೃಷ್ಣ ಕುಕ್ಯಾನ್, ಕೆ. ರಾಮಚಂದ್ರ ಹೆಬ್ಟಾರ್, ಆಡಳಿತ
ಮೊಕ್ತೇಸರ ಸತೀಶ್ ಉಪಾಧ್ಯಾಯ, ಮುದ್ದುಮೂಲ್ಯ, ಕೆ. ಸದಾಶಿವ ಶೆಟ್ಟಿ, ಹರೀಶ್ ಪಣಂಬೂರು ಉಪಸ್ಥಿತರಿದ್ದರು. ಕೆ. ಸದಾಶಿವ ಶೆಟ್ಟಿ ಸ್ವಾಗತಿಸಿ, ವಿರೇಶ್ ವಂದಿಸಿ, ಶಂಕರನಾರಾಯಣ ಮೈರ್ಪಾಡಿ ನಿರೂಪಿಸಿದರು.