Home ಧಾರ್ಮಿಕ ಸುದ್ದಿ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ

ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ

ಅಪೂರ್ವ ಸಾನ್ನಿಧ್ಯಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಸಿದ್ಧತೆ

1189
0
SHARE

ಬ್ರಹ್ಮಾವರ: ಕಲ್ಯಾಣಪುರ ಸಂತೆಕಟ್ಟೆಯ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದ ಪುನರುತ್ಥಾನ ಕಾರ್ಯ ತ್ವರಿತ ಗತಿಯಲ್ಲಿ ಜರಗುತ್ತಿದ್ದು ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಸಿದ್ಧತೆಗಳಾಗುತ್ತಿವೆ. ಎ.27ರಿಂದ ಮೇ 6ರ ವರೆಗೆ ಪುನಃ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕ ಜರಗಲಿದೆ.

ನಿರ್ಮಾಣ ಪ್ರಕ್ರಿಯೆ
ದೇವಾಲಯ ಸಮುಚ್ಚಯವನ್ನು ವಿಸ್ತಾರವಾಗಿ ಪರಿಕಲ್ಪಿಸಿ ವೀರಭದ್ರ ದೇವರನ್ನು ಪ್ರಧಾನವಾಗಿ ಸ್ವೀಕರಿಸಿ, ಆದಿಶಕ್ತಿಯನ್ನು ಉಪಸ್ಥಾನ ಸನ್ನಿಧಿಯಾಗಿ, ಮೂಲಸ್ಥಾನ ವೀರಭದ್ರ ದೇವರಷ್ಟೆ ಭವ್ಯವಾದ ಪ್ರಾಸಾದಗಳ ನಿರ್ಮಾಣವಾಗಿದೆ. ಈ ಎರಡು ದ್ವಿತಲದ ಗರ್ಭಗುಡಿ ತೀರ್ಥ ಮಂಟಪಗಳನ್ನೊಳಗೊಂಡ ನಿರ್ಮಿತಿಯು ನೈಋತ್ಯದಲ್ಲಿ ಗಣಪತಿ ಸಂಕಲ್ಪವನ್ನು ಹೊಂದಿದೆ. ಸುತ್ತು ಪೌಳಿಯಿಂದ ಆವೃತವಾಗಿದೆ. ಅಗ್ರ ಸಭೆಯ ರಚನೆಯು ಎರಡೂ ಗರ್ಭ ಗುಡಿಗಳಿಗೆ ಪರಸ್ಪರ ಹೊಂದಿಕೊಂಡಂತೆ ನಿರ್ಮಿಸಲ್ಪಡುತ್ತಿದೆ. ವೀರಭದ್ರ ದೇವರನ್ನು ಮೂಲಸ್ಥಾನ ಎಂದು ಪರಿಗ್ರಹಿಸಿದ್ದು ಬಲಿಕಲ್ಲುಗಳು, ಧ್ವಜಸ್ತಂಭ ಸಿದ್ಧಗೊಳ್ಳುತ್ತಿದೆ. ಈ ಸನ್ನಿಧಾನಕ್ಕೆ ಸೀಮಿತವಾಗಿ ಸ್ಥಾಪನೆಯಾಗಲಿದೆ.

ಪರಿವಾರ ಕ್ಷೇತ್ರ
ಮೂಲ ಬೆರ್ಮೆರ್‌(ಬ್ರಹ್ಮಲಿಂಗ) ಮತ್ತು ಸಿರಿಗಳಿಗೆ ನೈಋತ್ಯದಲ್ಲಿ ಪ್ರತ್ಯೇಕವಾದ ದ್ವಿತಲದ ಗರ್ಭಗುಡಿಯನ್ನು ನಿರ್ಮಿಸಲಾಗುತ್ತಿದೆ. ಪ್ರಾಸಾದ ಮಂಟಪ ಸಹಿತವಾದ ಚತುರಸ್ರ ಆಕಾರದ ಗುಡಿಗೆ ದೀಪ ದಳಿಯನ್ನು ಅಳವಡಿಸಲಾಗುವುದು. ಪುನಃ ನೈಋತ್ಯದಲ್ಲಿ ನಾಗ ಸನ್ನಿಧಾನವಿರುತ್ತದೆ. ದಕ್ಷಿಣ ಬದಿಯಲ್ಲಿ ಮೂರು ಮುಖಮಂಟಪ ಸಹಿತವಾದ ಸರಳ ನಿರ್ಮಿತಿಗಳಲ್ಲಿ ಅವುಗಳ ಸುಗಮ ಹೊಂದಾಣಿಕೆಗೆ ಅನುಗುಣವಾಗಿ(ಶಾಸ್ತ್ರ ಸೂಚನೆಯಂತೆ) ದೈವಗಳನ್ನು ನೆಲೆಗೊಳಿಸಲು ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.

ನೈಋತ್ಯದಿಂದ ಆಗ್ನೇಯಕ್ಕೆ ಸಾಲಾಗಿ ಅಡಕತ್ತಾಯ, ರಕ್ತೇಶ್ವರಿ, ಯಕ್ಷ- ಯಕ್ಷಿ, ಬಬ್ಬರ್ಯ ಸನ್ನಿಧಿಗಳು. ನಂದಿಕೇಶ್ವರ, ಈಶ್ವರಕುಮಾರ, ಕೋಟಿ ಪೂಂಜ, ಕಲ್ಕುಡ ಶಕ್ತಿಗಳಿಗೆ ಗುಡಿ. ಬಂಟ ಸಹಿತ ಪಂಚ ಧೂಮಾವತಿ ಹಾಗೂ ಮರ್ಲ್ ಧೂಮಾವತಿ ಸನ್ನಿಧಿ ಸಿದ್ಧಗೊಳ್ಳುತ್ತಿದೆ. ಕಾಳಿ, ಮಹಾಕಾಳಿ, ಭದ್ರಕಾಳಿ, ಪಂಜುರ್ಲಿ, ಬೈಕಡ್ತಿಯರಿಗೆ ಒಂದು ಸಂಕಲ್ಪ. ಹೀಗೆ ವಿಸೃತವಾದ ವಿಧಾನದಿಂದ ಶುದ್ಧ ಸಂಕಲ್ಪದ ನವನಿರ್ಮಾಣ ಕಾರ್ಯ ನಡೆಯುತ್ತಿದೆ. ಸುಮಾರು ಆರು ಕೋಟಿ ರೂ. ವೆಚ್ಚದ ಜೀರ್ಣೋದ್ಧಾರ ಸಾಗುತ್ತಿದೆ.

 

 

 

LEAVE A REPLY

Please enter your comment!
Please enter your name here