Home ಧಾರ್ಮಿಕ ಸುದ್ದಿ “ಧಾರ್ಮಿಕ ಚಿಂತನೆಗಳಿಂದ ಮಾನಸಿಕ ಶಾಂತಿ’

“ಧಾರ್ಮಿಕ ಚಿಂತನೆಗಳಿಂದ ಮಾನಸಿಕ ಶಾಂತಿ’

1829
0
SHARE

ಕಡಬ : ಮನುಷ್ಯ ಚಿಂತೆ ಮಾಡುವ ಬದಲು ಧಾರ್ಮಿಕ ಚಿಂತನೆ ಮಾಡಬೇಕು. ಇದರಿಂದ ಲಭಿಸುವ ಮಾನಸಿಕ ಶಾಂತಿ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದು ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ನಾರಾಯಣ ಗೌಡ ಕೊಲ್ಲಿಮಾರು ನುಡಿದರು.

ಅವರು ಶನಿವಾರ ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನಲ್ಲಿ ಬಲ್ಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಬಲ್ಯ (ಎ ಮತ್ತು ಬಿ) ಮತ್ತು ಕುಂತೂರು ಪದವು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಜರಗಿದ 15ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಧರ್ಮಪ್ರಜ್ಞೆ ಮೂಡಿದಾಗ ಮಾತ್ರ ಶಾಂತಿ ಮತ್ತು ಸುಭಿಕ್ಷೆ ನೆಲೆಸಲು ಸಾಧ್ಯ. ಆ ನಿಟ್ಟಿನಲ್ಲಿ ಸಾಮೂಹಿಕವಾಗಿ ಜರಗುವ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಔಚಿತ್ಯಪೂರ್ಣ ಎಂದು ಅಭಿಪ್ರಾಯಪಟ್ಟರು.

ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ವಲಯಾಧ್ಯಕ್ಷ ಲಕ್ಷ್ಮೀನಾರಾಯಣ ರಾವ್‌ ಆತೂರು ಧಾರ್ಮಿಕ ಉಪನ್ಯಾಸ ನೀಡಿದರು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕಡಬ ವಲಯಾಧ್ಯಕ್ಷ ದಯಾನಂದ ಗೌಡ ಬಡ್ಡಮೆ ಅತಿಥಿಯಾಗಿ ಆಗಮಿಸಿದ್ದರು. ಪೂಜಾ ಸಮಿತಿಯ ಉಪಾಧ್ಯಕ್ಷ ಬಾಬು ಗೌಡ ಕೆ.ಎಸ್‌., ಕಾರ್ಯದರ್ಶಿ ಮೋನಪ್ಪ ಟೈಲರ್‌, ಬಲ್ಯ ಎ ಒಕ್ಕೂಟದ ಅಧ್ಯಕ್ಷ ಅಚ್ಯುತ ಗೌಡ ಚೆನ್ನರಿಗೆ, ಬಿ ಒಕ್ಕೂಟದ ಅಧ್ಯಕ್ಷ ಸಂಜೀವ ದೇವಾಡಿಗ ಗಾಣದಕೊಟ್ಟಿಗೆ, ಕುಂತೂರು ಪದವು ಒಕ್ಕೂಟದ ಅಧ್ಯಕ್ಷೆ ನಂದಾ ಕೆ.ಎಸ್‌. ಉಪಸ್ಥಿತರಿದ್ದರು.

ಪೂಜಾ ಸಮಿತಿಯ ಅಧ್ಯಕ್ಷ ಅಚ್ಯುತ ದೇರಾಜೆ ಸ್ವಾಗತಿಸಿ, ಧನಂಜಯ ಕೊಡಂಗೆ ವಂದಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯ ಮೇಲ್ವಿಚಾರಕ ಬಾಬು ಬಿ. ನಿರೂಪಿಸಿದರು. ದೇವಸ್ಥಾನದ ಅರ್ಚಕ ಶ್ರೀಪತಿ ಭಟ್‌ ಹಾಗೂ ಬಳಗದವರು ಪೂಜೆ ನೆರವೇರಿಸಿದರು.

ಆರ್ಥಿಕ ಶಿಸ್ತು
ಮುಖ್ಯ ಅತಿಥಿಯಾಗಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್‌. ಮಾತನಾಡಿ, ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಕಲ್ಪನೆಯ ಕೂಸಾದ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ಕ್ರಾಂತಿಕಾರಕ ಧನಾತ್ಮಕ ಬದಲಾವಣೆಗಳು ನಡೆದಿವೆ. ಜನರ ನಡುವೆ ಸಂಘಟನಾತ್ಮಕ ಚಟುವಟಿಕೆಗಳೊಂದಿಗೆ ಅನ್ಯೋನ್ಯತೆಯ ಭಾವನೆ ಮೂಡಿದೆ. ಮುಖ್ಯವಾಗಿ ಆರ್ಥಿಕ ಶಿಸ್ತನ್ನು ಆಳವಡಿಸಿಕೊಂಡಿರುವ ಯೋಜನೆಯ ಸದಸ್ಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿರುವುದು ಸಂತಸದ ಸಂಗತಿ ಎಂದರು.

LEAVE A REPLY

Please enter your comment!
Please enter your name here