Home ಧಾರ್ಮಿಕ ಸುದ್ದಿ ಶಾರದಾ ಪೂಜೆಯಿಂದ ಆಧ್ಯಾತ್ಮಿಕ ಜ್ಞಾನ: ಕೇಮಾರು ಶ್ರೀ

ಶಾರದಾ ಪೂಜೆಯಿಂದ ಆಧ್ಯಾತ್ಮಿಕ ಜ್ಞಾನ: ಕೇಮಾರು ಶ್ರೀ

1570
0
SHARE

ಪುಂಜಾಲಕಟ್ಟೆ : ಇರ್ವತ್ತೂರು ಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ 2ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಪ್ರಯುಕ್ತ ಧಾರ್ಮಿಕ ಸಭೆ ಮೂಡುಪಡುಕೋಡಿ ಶಾಲಾ ವಠಾರದಲ್ಲಿ ಜರಗಿತು.

ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಆಶೀರ್ವಚಿಸಿ, ಚಂಚಲ ಮನಸ್ಸನ್ನು ಕೇಂದ್ರೀಕರಿಸಿ ಆಧ್ಯಾತ್ಮಿಕ ಸಾಧನೆ ಮಾಡಲು ಶಾರದಾ ಪೂಜೆ ಪೂರಕವಾಗಿದೆ ಎಂದರು. ಮಾವಿನಕಟ್ಟೆ ಉದ್ಯಮಿ ಡಾ| ಟಿ. ವರದರಾಜ ಪೈ ಅವರು ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಬಂಟ್ವಾಳ ರೋಟರಿ ಕ್ಲಬ್‌ ನಿಕಟಪೂರ್ವ ಅಧ್ಯಕ್ಷ ಸಂಜೀವ ಪೂಜಾರಿ ಬಿ.ಸಿ. ರೋಡ್‌, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್‌ ಬಿ. ಸುವರ್ಣ, ಎಲೆಕ್ಟ್ರಿಕಲ್‌ ಗುತ್ತಿಗೆದಾರ ಜಗನ್ನಾಥ ಪೂಜಾರಿ ಬಂಟ್ವಾಳ, ಸಮಿತಿ ಕಾರ್ಯಾಧ್ಯಕ್ಷ ಹರೀಂದ್ರ ಪೈ, ವಾಮದಪದವು ಉದ್ಯಮಿ ಸಂದೀಪ್‌ ಶೆಟ್ಟಿ, ಗುತ್ತಿಗೆದಾರ ದಿನೇಶ್‌ ಶೆಟ್ಟಿ, ಪೂನಾ ಉದ್ಯಮಿ ಶೇಖರ ಪೂಜಾರಿ, ಸಮಿತಿ ಪದಾಧಿಕಾರಿಗಳಾದ ರಮೇಶ್‌ ಗೌಡ, ಸುಪ್ರಿತ್‌ ಜೈನ್‌, ದಯಾನಂದ ಎಸ್‌., ಶ್ರೀನಿವಾಸ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ ಈ ಸಂದರ್ಭದಲ್ಲಿ ಕರೆಂಕಿ ಶ್ರೀ ದುರ್ಗಾ ಯುವಕ ಸಂಘದ ಅಧ್ಯಕ್ಷ, ಸರಕಾರಿ ಶಾಲೆ ಉಳಿಸಿ ಅಭಿಯಾನದ ಪ್ರವರ್ತಕ ಪ್ರಕಾಶ್‌ ಅಂಚನ್‌ ಕೇಲೊಡಿ ಅವರಿಗೆ ಶ್ರೀ ಶಾರದಾ ತಿಲಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸ್ಫರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಿತಿ ಅಧ್ಯಕ್ಷ ಡಾ| ರಾಮಕೃಷ್ಣ ಎಸ್‌ ಅವರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ. ರಾಜೀವ ಶೆಟ್ಟಿ ಎಡೂ¤ರು ಪ್ರಸ್ತಾವಿಸಿದರು. ಶಂಕರ ಶೆಟ್ಟಿ ಬೆದ್ರಮಾರ್‌ ವಂದಿಸಿದರು. ಮನ್ಮಥ ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ರಾಯಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಕೇಂದ್ರ ಇವರಿಂದ ಶ್ರೀ ಕೃಷ್ಣ ಲೀಲೆ-ಕಂಸ ವಧೆ ಯಕ್ಷಗಾನ ನಡೆಯಿತು. ಸಂಜೆ ಶ್ರೀ ಶಾರದಾ ಮೂರ್ತಿಯ ಶೋಭಾಯಾತ್ರೆ ನಡೆಯಿತು.

ದೇವರ ಅನುಗ್ರಹ ಸರಸ್ವತಿ ಜ್ಞಾನದ ಪ್ರತೀಕ ವಾಗಿದ್ದು, ಶಾರದಾ ಪೂಜೆಯಿಂದ ಸಾತ್ವಿಕ, ನಿಷ್ಕಳಂಕ ಮನಸ್ಸಿನಿಂದ ಆಧ್ಯಾತ್ಮಿಕ ಜ್ಞಾನ ದೊರೆತು ದೇವರ ಅನುಗ್ರಹ ಸಾಧ್ಯವಾಗುತ್ತದೆ.
 - ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಕೇಮಾರು ಸಾಂದೀಪನಿ ಸಾಧನಾಶ್ರಮ

LEAVE A REPLY

Please enter your comment!
Please enter your name here