Home ಧಾರ್ಮಿಕ ಸುದ್ದಿ ಈಶಾವಾಸ್ಯಂನಲ್ಲಿ ತಿರುಪತಿ ಶ್ರೀನಿವಾಸನಿಗೆ ವಿಶೇಷ ಪೂಜೆ

ಈಶಾವಾಸ್ಯಂನಲ್ಲಿ ತಿರುಪತಿ ಶ್ರೀನಿವಾಸನಿಗೆ ವಿಶೇಷ ಪೂಜೆ

1264
0
SHARE

ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಪರಿಸರದ ಉದ್ಯಮಿ ರಾಮ್‌ ಪ್ರಸಾದ್‌ ಅವರ ‘ಈಶಾವಾಸ್ಯಂ’ಗೆ ಆಗಮಿಸಿದ ತಿರುಪತಿಯ ಶ್ರೀನಿವಾಸನಿಗೆ ವಿಶೇಷ ಪೂಜೆ ಶನಿವಾರ ಬೆಳಗ್ಗೆ ನಡೆಯಿತು.

ತಿರುಮಲ ತಿರುಪತಿಯ ಶ್ರೀ ದೇವಿ, ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇವರು ಆಗಮಿಸಿ ಪೂಜೆಯನ್ನು ಸ್ವೀಕರಿಸಿದರು. ತಿರುಪತಿಯ ಅರ್ಚಕರಾದ ಸುರೇಶಾ ರಾಚಾರ್ಯ, ವಿಜಯ ಸಿಂಹ ಆಚಾರ್ಯ, ಸುಜಯ್‌ ಕೃಷ್ಣ, ಕುರೇಶ್‌ ಆಚಾರ್ಯ, ಆನಂದಾಚಾರ್ಯ ಹಾಗೂ ರಾಮಾಚಾರ್ಯ ಮೊದಲಾದವರು ವೇದ ಪಾರಾಯಣದ ಬಳಿಕ ವಿಶೇಷ ಪೂಜೆ ನಡೆಸಿದರು. ಇದೇ ಸಂದರ್ಭದಲ್ಲಿ ಭಕ್ತರು ಭಜನೆ ಹಾಡಿದರು.

ಪ್ರಸಾದ್‌, ಪದ್ಮಶ್ರೀ ಅವರ ನೇತೃತ್ವದಲ್ಲಿ ಸಂಕಲ್ಪ ಪ್ರಾರ್ಥನೆಯ ಬಳಿಕ ಶ್ರೀ ದೇವರ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ವಸಂತ ಭಟ್‌, ಶ್ರೀನಿವಾಸ ಭಟ್‌, ಲಕ್ಷ್ಮೀಶ ಭಟ್‌, ಮಹೇಶ್‌ ಭಟ್‌, ಸುಚಿತ್ರಾ, ವೆಂಕಟ್ರಮಣ ಅಡಿಗ, ಶಿವರಾಮ ಕಾಸರಗೋಡು, ಜಯಾನಂದ ಕುಮಾರ್‌ ಹೊಸದುರ್ಗ, ಗುರುಪ್ರಸಾದ ಕೋಟೆಕಣಿ, ಸತ್ಯನಾರಾಯಣ ಕಾಸರಗೋಡು, ಮುರಳಿ, ಕುಶಲ ಕುಮಾರ್‌, ಶ್ರೀಕಾಂತ್‌, ಕೆ.ಎನ್‌.ವೆಂಕಟ್ರಮಣ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here