ಉಳ್ಳಾಲ: ಪರಸ್ಪರ ತಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಶಾಂತಿಯಿಂದ ಬಾಳುವ ಮೂಲಕ ಬಲಿಷ್ಠ ಭಾರತ ನಿರ್ಮಾಣದಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.
ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಉಳ್ಳಾಲ ಸೈಯ್ಯದ್ ಮದನಿ ದರ್ಗಾಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಸಹನೆ, ಪ್ರೀತಿ, ತ್ಯಾಗ, ವಿಶ್ವಾಸದ ಜತೆಗೆ ಇನ್ನೊಬ್ಬರ ಕಷ್ಟವನ್ನು ಅರ್ಥೈಸಿ ಬಾಳಿಕೊಂಡು ಸಹೋದರತೆಯನ್ನು ಸಾರುವುದು ಹಬ್ಬದ ಸಂದೇಶವಾಗಿದೆ. ಹಬ್ಬದ ಸಂದೇಶವನ್ನು ಎಲ್ಲರಿಗೂ
ಸಾರುವ ಮೂಲಕ ಶಾಂತಿಯ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರಿಗೂ ಇದೆ ಎಂದು ಹೇಳಿದರು.
ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್, ಉಪಾಧ್ಯಕ್ಷ ಬಾವಾ ಮುಹಮ್ಮದ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹಾಜಿ, ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಾಫ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ್, ಮುಸ್ತಾಫ ಮಂಚಿಲ, ಅಯ್ಯೂಬ್ ಮಂಚಿಲ, ಮಹ್ಮೂದ್ ಅಳೇಕಲ, ಇಬ್ರಾಹಿಂ ಉಳ್ಳಾಲ ಬೈಲು, ನಗರಸಭಾ ಅಧ್ಯಕ್ಷರಾದ
ಹುಸೈನ್ ಕುಂಞಿ ಮೋನು, ಮಾಜಿ ಪುರಸಭಾ ಅಧ್ಯಕ್ಷರಾದ ಬಾಜಿಲ್ ಡಿ’ಸೋಜಾ, ಇಸ್ಮಾಯಿಲ್ ಅಳೇಕಲ ಮತ್ತಿತರರು ಉಪಸ್ಥಿತರಿದ್ದರು.