ರಾಯಚೂರು: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವ ನಿಮಿತ್ತ ನಡೆಯುತ್ತಿರುವ ಸಪ್ತರಾತ್ರೋತ್ಸವದ ಎರಡನೇ ದಿನವಾದ ಭಾನುವಾರ
ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಾತಃಕಾಲದಲ್ಲಿ ನಿರ್ಮಾಲ್ಯ ವಿಸರ್ಜನೆ, ಶ್ರೀ ಉತ್ಸವ
ರಾಯರ ಪಾದಪೂಜೆ ಹಾಗೂ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ನಂತರ ನೂತನ ಶಿಲಾ ಮಂಟಪದಲ್ಲಿ ಶ್ರೀಗಳಿಂದ ಶ್ರೀ ಮೂಲರಘುಪತಿ ವೇದವ್ಯಾಸರ ಪೂಜೆ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾಮಂಗಳಾರತಿ ನೆರವೇರಿಸಿದರು. ನಂತರ ತೀರ್ಥ ಪ್ರಸಾದ ವಿತರಣೆ ಜರುಗಿತು. ಸಂಜೆ ವಿದ್ಯಾರ್ಥಿಗಳಿಂದ ಜ್ಞಾನಯಜ್ಞ ನೆರವೇರಿತು. ಸೋಮವಾರ ರಾಯರ ಪೂರ್ವಾರಾಧನೆ ಜರುಗಲಿದೆ