ಪುತ್ತೂರು : ಶ್ರೀ ಮಹಾಮ್ಮಾಯಾ ದೇವಸ್ಥಾನದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಚಂಡಿಕಾ ಹವನ ಹಾಗೂ ವಿವಿಧ ವೈಧಿಕ ಕಾರ್ಯಕ್ರಮಗಳು ರವಿವಾರ ಬೆಳಗ್ಗಿನಿಂದ ನಡೆದವು.
ಬೆಳಗ್ಗೆ ಪ್ರಾರ್ಥನೆ ಅನಂತರ ಹವನ ಆರಂಭಗೊಂಡು ಮಧ್ಯಾಹ್ನ ಪೂರ್ಣಾ ಹುತಿಗೊಂಡಿತು. ಬಳಿಕ ಮಹಾಪೂಜೆ ನಡೆಯಿತು. ಅನ್ನಸಂತರ್ಪಣೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ರಾತ್ರಿ ರಂಗಪೂಜೆ, ದೀಪಾರಾಧನೆ, ವಿಶೇಷ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು