ಕೊಕ್ಕಡ: ಬಯಲು ಆಲಯದ ಗಣಪನೆಂದೇ ಪ್ರಸಿದ್ಧಿ ಪಡೆದ ಸೌತಡ್ಕ ಶ್ರೀ ಮಹಾಗಣಪತಿ ದೇವರಿಗೆ ಊರ ಪರವೂರ ಭಕ್ತರ ಸಹಕಾರದೊಂದಿಗೆ ಜರಗುವ ಮೂಡಪ್ಪ ಸೇವೆಯ ಅಂಗವಾಗಿ ಅಷ್ಟೋತ್ತರ ಶತನಾಳಿಕೇರ ಮಹಾಗಣಪತಿ ಹೋಮವು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ವರ್ಷಂಪ್ರತಿ ಮಾಘ ಶುದ್ಧ ಚೌತಿಯಂದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯದಂತೆ ದೇಗುಲದ ವತಿಯಿಂದ ಹಾಗೂ ಊರ-ಪರವೂರ ಭಕ್ತ ಮಹಾಜನರ ಸಹಕಾರದೊಂದಿಗೆ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ ನಡೆಯುತ್ತದೆ.
ಮೂಡಪ್ಪ ಸೇವೆಯ ಅಂಗವಾಗಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಅಷ್ಟೋತ್ತರ ಶತನಾಳಿಕೇರ ಮಹಾಗಣಪತಿ ಹೋಮ ನಡೆಯಿತು.