ಶಿರ್ವ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೂಡಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಡಿ.16 ರಂದು ಬ್ರಹ್ಮಶ್ರೀ ವೇ|ಮೂ| ಪುತ್ತೂರು ಹಯವದನ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ಸೂಡ ಶ್ರೀಶ ಭಟ್ ಅವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಗಲು ಮಹಾ ರಥೋತ್ಸವ ಸಂಪನ್ನಗೊಂಡಿತು.
ಶ್ರೀ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವದೊಂದಿಗೆ ಡಿ.12 ರಂದು ಧ್ವಜಾರೋಹಣ ನೆರವೇರಿದ್ದು ಡಿ.13ರಂದು ಷಷ್ಠಿ ಮಹೋತ್ಸವ ರಥೋತ್ಸವ, ಡಿ. 16ರಂದು ಕಲಶಾಭಿಷೇಕ, ರಥಶುದ್ಧಿ ಬಲಿ ನಡೆದು ರಥಾರೋಹಣ, ಹಗಲು ರಥೋತ್ಸವ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನೆರವೇರಿದ್ದು ನೂರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಜಯಶೀಲ ಹೆಗ್ಡೆ, ಅರ್ಚಕ ವಿಷ್ಣುಮೂರ್ತಿ ಭಟ್, ಅರ್ಚಕ ಶ್ರೀಧರ ಭಟ್ ಬೆಳ್ಮಣ್, ಶಿರ್ವ ಕೋಡು ಬಾಲಕೃಷ್ಣ ಹೆಗ್ಡೆ, ಕುಕ್ಕೆಹಳ್ಳಿ ದೊಡ್ಡಬೀಡು ಸುಧಾಕರ ಹೆಗ್ಡೆ, ಬೆಳ್ಮಣ್ನ ಉದ್ಯಮಿ ಎಸ್.ಕೆ. ಸಾಲ್ಯಾನ್, ಪ್ರಶಾಂತ್ ಶೆಟ್ಟಿ ಸೂಡ, ಸಚ್ಚಿದಾನಂದ ಪಾಂಡೆ ಮುಂಬಯಿ, ಶ್ರೀನಾಥ್ ಹೆಗ್ಡೆ, ಶಿರ್ವ ಕೋಡು ದಿನೇಶ್ ಹೆಗ್ಡೆ, ರಿತೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಗಣೇಶ್ ಶೆಟ್ಟಿ, ಭಾಸ್ಕರ ಆಚಾರ್ಯ, ಬೆಳ್ಮಣ್ ಗ್ರಾ.ಪಂ.ಸದಸ್ಯ ಶಂಕರ ಕುಂದರ್, ಶಿರ್ವ ಕೋಡು ಕುಟುಂಬಸ್ಥರು, ಬ್ರೈಟ್ ಫ್ರೆಂಡ್ಸ್ ಗ್ರೂಪ್ನ ಪದಾಧಿಕಾರಿಗಳು, ಮಕ್ಕೇರಿಬೈಲು ಆದರ್ಶ್ ಫ್ರೆಂಡ್ಸನ ಪದಾಧಿಕಾರಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.