ಬೆಳ್ತಂಗಡಿ : ಭಜನ ಕಮ್ಮಟವು ಸಂಸ್ಕಾರದ ಜತೆಗೆ ಭಜನಾ ಸಂಸ್ಕೃತಿಯನ್ನು ಮನೆ ಮನೆಗೂ ತಲುಪಿಸುವ ಕೆಲಸ ಮಾಡುತ್ತಿದೆ. ಭಜನೆಗೆ ಎಲ್ಲರನ್ನೂ ಒಂದು ಗೂಡಿಸುವ ಸಾತ್ವಿಕ ಶಕ್ತಿ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ಅವರು ಧರ್ಮಸ್ಥಳಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನಡೆಯುತ್ತಿರುವ ಭಜನಾ ತರಬೇತಿ ಕಮ್ಮಟದಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಅಶೋಕ್ ಭಟ್ಉಜಿರೆ ಅವರು ಮಾತನಾಡಿ, ಅಂತರಂಗ ಶುದ್ಧಿಗೆ ಭಜನೆ ಪೂರಕ. ಮನೆ ಮನೆಯಲ್ಲಿಯೂ ಪ್ರತಿನಿತ್ಯ ಭಜನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕಲಾವಿದರಾದ ಶಂಕರ ಶ್ಯಾನ್ಬಾಗ್, ರಾಮಕೃಷ್ಣ ಕಾಟುಕುಕ್ಕೆ, ರಾಜೇಶ್ ಪಡಿಯಾರ್, ಮನೋರಮಾ ತೋಳ್ಪಾಡಿತ್ತಾಯ ಅವರು ತರಬೇತಿ ನೀಡಿದರು. ದೇಗುಲದ ಕಚೇರಿ ವ್ಯವಸ್ಥಾಪಕ ಹರೀಶ್ ರಾವ್, ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಡಾ| ಗೀತಾ, ಶ್ರೀನಿವಾಸ್ ರಾವ್ ಚಿಂತನಾ ಕಾರ್ಯಕ್ರಮ ನಡೆಸಿ ಕೊಟ್ಟರು.
ಶ್ರೀ ಕ್ಷೇತ್ರ ಕನ್ಯಾಕುಮಾರಿ ಭಜನ ಮಂಡಳಿಯವರಿಂದ ಭಜನ ಪ್ರಾತ್ಯಕ್ಷಿಕೆ, ಕ್ಷೇತ್ರದ ನೌಕರರಿಂದ ನೆಮ್ಮದಿ ಅಪಾಟ್ ìಮೆಂಟ್ ನಾಟಕ ಪ್ರದರ್ಶನ, ಎಸ್ ಡಿಎಂ ಕಾಲೇಜು ಕಲಾವೈಭವ ತಂಡದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.