Home ಧಾರ್ಮಿಕ ಸುದ್ದಿ ‘ಭಜನೆ ಮೂಲಕ ಸಮಾಜವು ಒಗ್ಗೂಡಿಸಲು ಸಾಧ್ಯವಾಗುತ್ತದೆ’

‘ಭಜನೆ ಮೂಲಕ ಸಮಾಜವು ಒಗ್ಗೂಡಿಸಲು ಸಾಧ್ಯವಾಗುತ್ತದೆ’

ನೆಲ್ಲಿಕಾರು ಓಂ ಶಕ್ತಿ ಭಜನ ಮಂದಿರ ಉದ್ಘಾಟನೆ

1247
0
SHARE
ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.

ಮೂಡಬಿದಿರೆ: ಭಜನೆಯ ಮೂಲಕ ಸಮಾಜವನ್ನು ಒಗ್ಗೂಡಿಸಲು ಸಾಧ್ಯ’ ಎಂದು ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಎಂದು ಹೇಳಿದರು. ನೆಲ್ಲಿಕಾರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿದ ‘ಓಂ ಶಕ್ತಿ ಭಜನ ಮಂದಿರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಲ್ಪಕಾರ್ಯಕ್ಕೆ ಉತ್ಕೃಷ್ಟವೆನಿಸಿರುವ ನೆಲ್ಲಿಕಾರು ಶಿಲೆಗಾಗಿ ಹೆಸರಾದ ಈ ಊರು ಶಿಲ್ಪಿಗಳನ್ನು, ವೈದಿಕರನ್ನು ನೀಡಿದ ಮಾದರಿ ಗ್ರಾಮವಾಗಿದೆ ಎಂದು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್‌ ಮಾತನಾಡಿ ‘ಭಜನೆಯಿಂದ ಧಾರ್ಮಿಕತೆ ಗಟ್ಟಿಯಾಗುವ ಜತೆಗೆ ಸಮಾಜದಲ್ಲಿ ವಿಭಜನೆಯನ್ನು ತಡೆಯಲು ಸಾಧ್ಯ. ಭಜನ ಮಂದಿರಗಳು ಎಲ್ಲ ಊರುಗಳಲ್ಲೂ ಸ್ಥಾಪನೆಗೊಳ್ಳಬೇಕು ಎಂದರು.

ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ರತ್ನಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಶಾಸಕ ಕೆ. ಅಭಯಚಂದ್ರ, ಸಂಘದ ಗೌರವಾಧ್ಯಕ್ಷ ಪ್ರಸಾದ್‌ ಸಿ.ಆಚಾರ್ಯ, ನೆಲ್ಲಿಕಾರು ಗ್ರಾ.ಪಂ. ಅಧ್ಯಕ್ಷ ಜಯಂತ ಹೆಗ್ಡೆ, ಡಾ| ಶೀತಲ್‌ ಕುಮಾರ್‌, ಅಸ್ರಣ್ಣ ವಾಸುದೇವ ಭಟ್‌, ಕೂಡುವಳಿಕೆ ಮೊಕ್ತೇಸರ ಲಿಂಗಪ್ಪ ಆಚಾರ್ಯ, ಉದ್ಯಮಿಗಳಾದ ಪ್ರವೀಣ್‌ ಕುಮಾರ್‌ ಜೈನ್‌, ಶ್ರೇಣಿಕ್‌ರಾಜ್‌ ಜೈನ್‌, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ ಭಾಗವಹಿಸಿದರು.

ಸಂಘದ ಅಧ್ಯಕ್ಷ ರಮೇಶ್‌ ಆಚಾರ್ಯ, ಉಪಾಧ್ಯಕ್ಷ ಹರೀಶ್‌ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಸುಶೀಲಾ ಆಚಾರ್ಯ ಉಪಸ್ಥಿತರಿದ್ದರು. ಭಜನ ಮಂದಿರ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಒದಗಿಸಿದ ಕೆ.ಅಭಯಚಂದ್ರ, ಉದ್ಯಮಿ ರವೀಂದ್ರ ಶೆಟ್ಟಿ, ನೆಲ್ಲಿಕಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್‌ ಆಚಾರ್ಯ, ಶಿಲಾ ಶಿಲ್ಪವನ್ನು ಕೊಡುಗೆಯಾಗಿ ನೀಡಿದ ಶಿಲ್ಪಿ ಹರೀಶ್‌ ಆಚಾರ್ಯ, ಭಜನ ಮಂಡಳಿಯ ಮಾಜಿ ಅಧ್ಯಕ್ಷರು, ದಾನಿಗಳನ್ನು ಸಮ್ಮಾನಿಸಲಾಯಿತು. ಉಪನ್ಯಾಸಕ ನವೀನ್‌ ಆಚಾರ್ಯ ಸ್ವಾಗತಿಸಿದರು. ಗೌರವ ಪ್ರಧಾನ ಅರ್ಚಕ ಎನ್‌.ಎಸ್‌. ಶ್ರೀಧರ ಪುರೋಹಿತ್‌ ಪ್ರಸ್ತಾವನೆಗೈದರು. ಕೇಶವ ಆಚಾರ್ಯ ವಂದಿಸಿದರು. ಪುರೋಹಿತ್‌ ದಾಮೋದರ ಶರ್ಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here