ಜಪ್ಪಿನಮೊಗರು: ತಂದೊಳಿಗೆ ಶ್ರೀ ಆದಿಮಾಯೆ ದೇವಸ್ಥಾನದ ನವೀಕರಣ ಹಾಗೂ ಪುನಃ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರೀ ಅವರು ಉದ್ಘಾಟಿಸಿದರು.
ಧರ್ಮಕ್ಷೇತ್ರಗಳ ಪುನರುಜ್ಜೀವನ ವಾದಾಗ ಸಮಾಜಕ್ಕೆ ಶ್ರೇಯಸ್ಸು ದೊರಕಿ ದಂತಾಗುತ್ತದೆ. ಧಾರ್ಮಿಕ ಆಚರಣೆಗಳ ಮೂಲಕವಾಗಿ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ. ಧರ್ಮಕ್ಷೇತ್ರಗಳ ಮೂಲಕ ಮನ ಸ್ಸಿಗೆ ಪೂರ್ಣವಾದ ಜೀವನೋತ್ಸಾಹ ದೊರೆಯಲು ಸಾಧ್ಯ ಎಂದು ಅವರು ಹೇಳಿದರು. ತಂದೊಳಿಗೆ ಶ್ರೀ ಆದಿಮಾಯೆ ದೇವ ಸ್ಥಾನದ ನವೀಕರಣ ಅತ್ಯಂತ ಸುಂದರ ರೀತಿಯಲ್ಲಿ ನೆರವೇರಿದ್ದು, ಪುನಃ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಾಂಗವಾಗಿ ನೆರವೇರಲಿದೆ ಎಂದು ಆಶಿಸಿದರು.
ಸತ್ಸಂಗ ಮಂಗಳೂರು ಇದರ ಅಧ್ಯಕ್ಷ ವಾಸುದೇವ ಕೊಟ್ಟಾರಿ ಅಧ್ಯಕ್ಷತೆ ವಹಿಸಿ ದ್ದರು. ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವ ಸ್ಥಾನದ ಆಡಳಿತ ಮೊಕ್ತೇಸರ ಜೆ. ಅನಿಲ್ ಶೆಟ್ಟಿ ಮೆನ್ನು ತೋಟಗುತ್ತು, ನಿವೃತ್ತ ಪೊಲೀಸ್ ಅಧೀಕ್ಷಕ ಮಿತ್ರ ಹೆರಾಜೆ, ಉದ್ಯಮಿಗಳಾದ ಪುಷ್ಪರಾಜ್ ಶೆಟ್ಟಿ, ಶ್ರೀಕರ ಪ್ರಭು, ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಸೀನಿಯರ್ ಮ್ಯಾನೇಜರ್ ಯು. ನಾರಾಯಣ, ಉದ್ಯಮಿ ವಲೇರಿಯರ್ ಮೆಂಡೋನ್ಸಾ ಬೆಳ್ಮಣ್, ತಂದೊಳಿಗೆ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಖಲಂದರ್ ಶಾಫಿ ಮದನಿ, ಕ್ಷೇತ್ರದ ಧರ್ಮದರ್ಶಿ ದಯಾನಂದ, ಆಡಳಿತ ಮೊಕ್ತೇಸರ ದೇವದಾಸ ಶೆಟ್ಟಿ, ಸುಭಾಷ್ ಅಡಪ ಮುಂತಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಜೆ. ನಾಗೇಂದ್ರಕುಮಾರ್ ಸ್ವಾಗತಿಸಿದರು. ಅಧ್ಯಕ್ಷ ಹರೀಶ್ ಶೆಟ್ಟಿ ತಾರ್ದೊಲ್ಯ ವಂದಿಸಿದರು.