Home ಧಾರ್ಮಿಕ ಕಾರ್ಯಕ್ರಮ ಸಿರಿಬಾಗಿಲು ಶ್ರೀ ವಯನಾಟ್ ಕುಲವನ್‌ ದೈವಸ್ಥಾನದ ಪ್ರತಿಷ್ಠೆ

ಸಿರಿಬಾಗಿಲು ಶ್ರೀ ವಯನಾಟ್ ಕುಲವನ್‌ ದೈವಸ್ಥಾನದ ಪ್ರತಿಷ್ಠೆ

451
0
SHARE

ಕುಂಬಳೆ: ಸಿರಿಬಾಗಿಲು ಶ್ರೀ ವಯ ನಾಟ್ ಕುಲವನ್‌ ದೈವಸ್ಥಾನದ ಪುನಃಪ್ರತಿಷ್ಠಾ ಮಹೋತ್ಸವವು ಜು.3 ರಂದು ಆರಂಭಗೊಂಡು ಜು.12 ರತನಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ಜು.3 ರಂದು ನೂತನ ಗೃಹದ ವಾಸ್ತು ಪೂಜೆ,ಜು.4 ರಂದು ಗೃಹಪ್ರವೇಶ,ಪುತ್ತರಿ ಉತ್ಸವದಂಗವಾಗಿ ಬಾಳೆಗೊನೆ ಕಡಿಯುವ ಮುಹೂರ್ತ ಜರಗಿತು. ಜು.10 ರಂದು ವಯನಾಟ್ ಕುಲವನ್‌ ದೈವಸ್ಥಾನದಲ್ಲಿ ವಾಸ್ತುಪೂಜೆ ಜರಗಿತು.

ಜು.11 ರಂದು ಬೆಳಗ್ಗೆ ಗಣಪತಿ ಹೋಮದ ಬಳಿಕ 10.51 ರಿಂದ 12.51ರೊಳಗಿನ ಮುಹೂರ್ತದಲ್ಲಿ ಶ್ರೀವಿಷ್ಣು ಮೂರ್ತಿ,ಶ್ರೀ ವಯನಾಟ್ ಕುಲವನ್‌, ಕಂಡನಾರ್‌ ಕೇಳನ್‌, ಕೋರಚ್ಚನ್‌, ಶ್ರೀ ಗುಳಿಗನ್‌ ದೈವಗಳ ಪುನಃಪ್ರತಿಷ್ಠೆ ವಿಧ್ಯುಕ್ತವಾಗಿ ಜರಗಿ ಮಧ್ಯಾಹ್ನ ಅನ್ನದಾನ ನಡೆಯಿತು.

ಶ್ರೀಗುಳಿಗನಿಗೆ ನೈವೇದ್ಯ, ರಾತ್ರಿಪುತ್ತರಿ ಮಹೋತ್ಸವ,ಶ್ರೀವಿಷ್ಣುಮೂರ್ತಿದೈವದ ತೊಡಂಙಲ್ ಬಳಿಕ ಅನ್ನದಾನ ನಡೆಯಿತು.

LEAVE A REPLY

Please enter your comment!
Please enter your name here