ಕುಂಬಳೆ: ಶತಮಾನಗಳ ಹಿಂದಿನ ಕಾಲದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಾಜವೈಭವ ದಿಂದ ನಡೆಯುತ್ತಿದ್ದ ಸಿರಿಬಾಗಿಲು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಉತ್ಸವಾದಿ ಕಾರ್ಯಕ್ರಮಗಳು ಮತ್ತೆ ಜು. 3ರಿಂದ 12ರ ವರೆಗೆ ನವೀಕೃತ ಕ್ಷೇತ್ರದಲ್ಲಿ ಪುನಃಪ್ರತಿಷ್ಠಾ ಮಹೋತ್ಸವವು ಸಂಭ್ರಮದಿಂದ ಅಪಾರ ಭಕ್ತರ ಸಮ್ಮುಖದಲ್ಲಿ ಭಕ್ತಿ ಸಡಗರೊಂದಿಗೆ ಜರಗಿತು.
ಜು. 11ರಂದು ಶ್ರೀ ವಯನಾಟ್ ಕುಲವನ್ ದೈವದ ಬೆಳ್ಚಪ್ಪಾಡರಾದ ರವಿ ಬೆಳ್ಚಪ್ಪಾಡರು ಮತ್ತು ಶ್ರೀ ವಿಷ್ಣು ಮೂರ್ತಿ ದೈವದ ಬೆಳ್ಚಪ್ಪಾಡರಾದ ಅರವಿಂದ ಬೆಳ್ಚಪ್ಪಾಡ ಅವರ ನೇತೃತ್ವದಲ್ಲಿ ವಿಧಿ ವಿಧಾನಗಳೊಂದಿಗೆ ಚಂದ್ರ ವೈ.ಕೆ. ಅವರ ಕಾರ್ಮಿಕತ್ವದಲ್ಲಿ ಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಟ್ ಕುಲ ವನ್, ಕಂಡನಾರ್ ಕೇಳನ್, ಕೋರಚ್ಚನ್, ಶ್ರೀ ಗುಳಿಗನ್ ದೈವಗಳ ಪುನರ್ ಪ್ರತಿಷ್ಠೆ ನಡೆಯಿತು.
ಪುನಃಪ್ರತಿಷ್ಠಾ ಮಹೋತ್ಸವದ ಕೊನೆಯ ದಿನವಾದ ಜು. 12ರಂದು ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವಕೋಲ ದರ್ಶನದ ಬಳಿಕ ಮಧ್ಯಾಹ್ನ ಅನ್ನದಾನ ನಡೆಯಿತು. ಶುಕ್ರವಾರ ಸಂಜೆ ಕೈವೀದ್ನೊಂದಿಗೆ ಮಹೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.