ಪೆರ್ಲ : ರಾಮಾಯಣ ಮಾಸಾಚರಣೆ ಪ್ರಯುಕ್ತ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿ ಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾ ಸ್ತದವರೆಗೆ ಅನ್ನ, ನೀರು ಸೇವಿಸದೇ ಕುಳಿತಲ್ಲಿಂದ ಏಳದೇ “ಸುಮ್ಮನೆ ದೊರಕು ವುದೇ ಶ್ರೀ ರಾಮನ ದಿವ್ಯನಾಮ’ ಎನ್ನುವ ಶೀರ್ಷಿಕೆಯೊಂದಿಗೆ ಹರಿನಾಮ ಸಂಕೀರ್ತನಾಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ನಿತ್ಯ ಶ್ರೀರಾಮನ ನಾಮವನ್ನು ಸತತ 12 ಗಂಟೆಗಳ ಕಾಲ ಸ್ಮರಿಸುವ ಮೂಲಕ ಭಕ್ತಿ ಸಾಧನೆ ಮೆರೆದರು.
ಶ್ರೀ ಕ್ಷೇತ್ರದ ಅರ್ಚಕ ರಾಮಚಂದ್ರ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆ 6ರಿಂದ ಸುಮಾರು 12 ಗಂಟೆಗಳ ಕಾಲ ಅಖಂಡ ಶ್ರೀರಾಮನ ಸಂಕೀರ್ತನೆ ನಡೆಯಿತು.
ರಾಮಕೃಷ್ಣ ಕಾಟುಕುಕ್ಕೆಯವರು ಕಾಸರಗೋಡು ಜಿಲ್ಲೆಯಲ್ಲಿ ಭಜನ ತರಬೇತಿಯನ್ನು ಹುಟ್ಟು ಹಾಕಿದ ಮೊದಲಿಗರು. ಕರ್ನಾಟಕ, ಮುಂಬಯಿ ಗಳಲ್ಲಿ ಅನೇಕ ಭಜನ ಸಂಘಗಳ ಸೃಷ್ಟಿಗೆ ಕಾರಣಕರ್ತರಾಗಿದ್ದಾರೆ.