ಕಾಪು : ಪೊಲಿಪು ಕಾಂಚನ್ ಮೂಲಸ್ಥಾನದ ಶ್ರೀ ಮೂಲ ನಾಗ ಬ್ರಹ್ಮ ದೇವರಿಗೆ ಬೆಳ್ಳಿಯ ಕವಚ ಸಮರ್ಪಣೆ, ಚಿನ್ನದ ಸರ ಸಮರ್ಪಣೆ ಸಹಿತ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ಎ. 20ರಂದು ಜರಗಿತು
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಗಮ ವಿದ್ವಾಂಸ ವೇ| ಮೂ| ಕೇಂಜ ಶ್ರೀಧರ ತಂತ್ರಿಯವರ ಉಪಸ್ಥಿತಿಯಲ್ಲಿ ಕ್ಷೇತ್ರದ ಪುರೋಹಿತ ಬೆಳ್ಳೆ ಮಾಧವ ಭಟ್ ಇವರ ನೇತೃತ್ವದಲ್ಲಿ ನಾಗದೇವರಿಗೆ ತನು – ತಂಬಿಲ, ಪಂಚಾಮೃತ ಅಭಿಷೇಕ, ನಾಗದರ್ಶನ, ತುಲಾಭಾರ ಸೇವೆ ನಡೆಯಿತು.
ಪೊಲಿಪು ಕಾಂಚನ್ ಮೂಲಸ್ಥಾನದ ಗೌರವಾಧ್ಯಕ್ಷ ಎ.ಎಂ. ಕಾಂಚನ್, ಅಧ್ಯಕ್ಷ ಜನಾರ್ದನ ಕಾಂಚನ್ ಗುಜ್ಜರಬೆಟ್ಟು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗಣೇಶ್ ಕಾಂಚನ್ ಮಲ್ಪೆ, ಮುಂಬಯಿ ಸಮಿತಿಯ ಅಧ್ಯಕ್ಷ ಎಂ.ಸಿ. ಕಾಂಚನ್ ಮುಂಬಯಿ, ಉಪಾಧ್ಯಕ್ಷ ಕೇಶವ ಕಾಂಚನ್ ಮುಂಬಯಿ, ಮೂಲಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕಾಂಚನ್ ಪೊಲಿಪು, ಕೋಶಾಧಿಕಾರಿ ರಾಜೇಶ್ ಕಾಂಚನ್ ಕಾಪು, ಮಹಿಳಾ ಸಮಿತಿಯ ಅಧ್ಯಕ್ಷೆ ಪದ್ಮಾವತಿ ಎಂ. ಪುತ್ರನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷೆ ಜಯಶ್ರೀ ಮಲ್ಪೆ, ಹಿರಿಯರಾದ ಭಾಸ್ಕರ ಕಾಂಚನ್ ತಣ್ಣೀರ್ಬಾವಿ, ಶ್ರೀನಿವಾಸ ಕಾಂಚನ್ ಮುಂಬಯಿ, ಯು. ದಾಮೋದರ್ ಉಡುಪಿ, ಸಿ.ಎ. ಗಣೇಶ್ ಕಾಂಚನ್ ಉಡುಪಿ, ಮೋಹನ್ ಕಾಂಚನ್ ಮಲ್ಪೆ, ಸಮಿತಿಯ ಸದಸ್ಯರು, ಕಾಂಚನ್ ಕುಟುಂಬಿಕರು ಉಪಸ್ಥಿತರಿದ್ದರು.