Home ಧಾರ್ಮಿಕ ಸುದ್ದಿ ಪೊಳಲಿ ಕ್ಷೇತ್ರಕ್ಕೆ ರಜತ ಕವಚ ಸಮರ್ಪಣೆ ಆಮಂತ್ರಣ ಪತ್ರಿಕೆ ಬಿಡುಗಡೆ

ಪೊಳಲಿ ಕ್ಷೇತ್ರಕ್ಕೆ ರಜತ ಕವಚ ಸಮರ್ಪಣೆ ಆಮಂತ್ರಣ ಪತ್ರಿಕೆ ಬಿಡುಗಡೆ

1720
0
SHARE

ಉಳ್ಳಾಲ, : ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರಕ್ಕೆ ತೀಯಾ ಸಮಾಜದಿಂದ ಹಿಂದೆಯೂ ಸೇವೆ ನಡೆದಿದ್ದು ಮುಂದಿನ ದಿನಗಳಲ್ಲಿಯೂ ಹಿರಿಯರ ಧಾರ್ಮಿಕ ಚಿಂತನೆಯಂತೆ ಕ್ಷೇತ್ರದ ಸೇವೆ ಮುಂದುವರೆಯಲಿದ್ದು ಈ ನಿಟ್ಟಿನಲ್ಲಿ 20 ಲಕ್ಷ ರೂ. ಮೌಲ್ಯದ ರಜತ ಕವಚದ ಸಮರ್ಪಣೆಗೆ ಸಂಬಂಧಿಸಿದಂತೆ ನಿರ್ಮಾಣ ಕಾರ್ಯ ಶೇ. 90
ಮುಗಿದಿದೆ ಎಂದು ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಅಭಿಪ್ರಾಯಪಟ್ಟರು.

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರೀ ಗುಡಿಯ ದ್ವಾರಧ್ಯೇಯಗಳಿಗೆ ತೀಯಾ ಸಮಾಜದ ವತಿಯಿಂದ ಸೇವಾ ರೂಪವಾಗಿ ಅರ್ಪಿಸಲಿರುವ 20 ಲಕ್ಷ ರೂ. ಮೌಲ್ಯದ ರಜತ ಕವಚದ ಸಮರ್ಪಣಾ ಸಮಾರಂಭದ ಆಮಂತ್ರಣ ಪತ್ರಿಕೆ ಉಳ್ಳಾಲ ಶ್ರೀ ಚೀರುಂಭಾ ಭಗವತೀ ದೇವಸ್ಥಾನದಲ್ಲಿ ಬಿಡುಗಡೆಯ ಬಳಿಕ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ಷೇತ್ರದ ಆಚಾರಪಟ್ಟವರು ಹಾಗೂ ಗುರಿಕಾರರು ಪ್ರಾರ್ಥಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಬಾಬು ಬೆಳ್ಚಾಡ, ಉಪಾಧ್ಯಕ್ಷ ಸುರೇಶ್‌ ಭಟ್ನಗರ, ಕೋಶಾಧಿಕಾರಿ ಯಶವಂತ ಉಚ್ಚಿಲ್‌, ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ಅಧ್ಯಕ್ಷ ಚಿದಾನಂದ ಗುರಿಕಾರ, ಕಾರ್ಯಾಧ್ಯಕ್ಷ ಉಮೇಶ್‌ ಸಾಲ್ಯಾನ್‌ ಬೆಂಜನಪದವು, ಉಪಾಧ್ಯಕ್ಷ ರಾಮಚಂದ್ರ ಬಂಗೇರ ಮಾರಿಪಳ್ಳ, ರಾಘವ ಟೈಲರ್‌ ಕೈಕಂಬ, ಗೋಪಾಲ ಬೆಳ್ಚಡ ಬೆಂಜನಪದವು, ಕೋಶಾಧಿಕಾರಿ ಧನಂಜಯ ಕೆ. ಸಾಲ್ಯಾನ್‌ ಬೆಂಜನಪದವು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಿ. ಜನಾರ್ದನ ಅಮಂಜೆ ಸಮಾರಂಭದ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here