ಮೂಲ್ಕಿ : ಬಪ್ಪನಾಡು ದೇವಸ್ಥಾನದ ಆಡಳಿತಕ್ಕೆ ಒಳಪಟ್ಟಿರುವ ಮೂಲ್ಕಿ ಕೊಳಚಿಕಂಬಳ ಶ್ರೀ ಜಾರಂದಾಯ ದೈವ ಸ್ಥಾ ನದ ಶ್ರೀ ಜಾರಂದಾಯ ದೈವಕ್ಕೆ ದಾನ ರೂಪದಲ್ಲಿ ಮಂಗಳೂರಿನ ಉದ್ಯಮಿ ಕೆ. ಮಹಾಬಲ ಸುವರ್ಣ ಅವರು ನೀಡಿದ ನೂತನ ಬೆಳ್ಳಿಯ ಅಣಿ ಮತ್ತು ಬಲಪಾತ್ರೆಯನ್ನು ಬಪ್ಪನಾಡು ದೇವಸ್ಥಾನದಿಂದ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಕ್ಷೇತ್ರಕ್ಕೆ ಸಮರ್ಪಿಸಲಾಯಿತು.
ಬಪ್ಪನಾಡು ದೇವ ಸ್ಥಾ ನ ದ ಅರ್ಚಕ ನರಸಿಂಹ ಭಟ್ ಅವರು ವಿಶೇಷ ಪ್ರಾರ್ಥನೆ ಯನ್ನು ನೆರವೇರಿಸಿದರು. ಆಡಳಿತ ಮೊಕ್ತೇ ಸರ ಎನ್.ಎಸ್. ಮನೋಹರ ಶೆಟ್ಟಿ,, ಜಯಮ್ಮ ಬಿ., ಕೆ. ಮಹಾಬಲ ಸುವರ್ಣ, ಶೇಖರ ಪೂಜಾರಿ, ನಿರಂಜನ ಪೂಜಾರಿ, ರಾಘು ಸುವರ್ಣ, ವಾಸು ಪೂಜಾರಿ, ಗೋಪಿನಾಥ ಪಡಂಗ, ಲತೀಶ್ ಸುವರ್ಣ, ವಾಮನ ಕೋಟ್ಯಾನ್, ಪ್ರಕಾಶ್ ಸುವರ್ಣ ಮೊದಲಾದವರಿದ್ದರು.