ಉಡುಪಿ : ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಆವರಣದಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಷಷ್ಠ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಮತ್ತು ಶ್ರೀ ಮಹಾರಂಗ ಪೂಜಾ ಮಹೋತ್ಸವವು ಆಗಮ ಪಂಡಿತ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಜು.5ರಂದು ಜರಗಲಿದೆ.
ಜು.4ರಂದು ಸಂಜೆ 5.30ರಿಂದ 8.30ರ ವರೆಗೆ ನವೀಕರಣದ ಪ್ರಯುಕ್ತ ವಾಸ್ತು ರಾಕ್ಷೋಘ್ನ ಹೋಮ, ಜು.5ರಂದು ಸಂಜೆ 5.30ರಿಂದ ವಿವಿಧ ಭಜನ ತಂಡಗಳಿಂದ ಭಜನ ಕಾರ್ಯಕ್ರಮ ಜರಗಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ ಹೆಗ್ಡೆ , ಬಂಟರ ಯಾನೆ ನಾಡವರ ಮಾತೃ ಸಂಘ ದ.ಕ. ಇದರ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮತ್ತು ಉಡುಪಿ ತಾಲೂಕು ಸಮಿತಿ ಸಂಚಾಲಕ ಜಯಕರ ಶೆಟ್ಟಿ ಇಂದ್ರಾಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.