Home ಧಾರ್ಮಿಕ ಸುದ್ದಿ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಸಭೆ

ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಸಭೆ

1793
0
SHARE

ಕುಂದಾಪುರ: ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಶ್ರೀ ನಾರಾಯಣ ಗುರು ಮಂದಿರ ಕುಂದಾಪುರದಲ್ಲಿ ಜೀಣಾಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಸಾರ್ವಜನಿಕ ಸಹಸ್ರ ಮಹಾಗಣಪತಿ ಯಾಗ ಮಾ. 2 ರಿಂದ ಆರಂಭಗೊಂಡಿದ್ದು, ಮಾ. 5 ರಂದು ಸಮಾಪನಗೊಳ್ಳಲಿದೆ.

ಮಾ. 5ರಂದು ಬೆಳಗ್ಗೆ ಮಹಾಗಣಪತಿ ಯಾಗ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಜನ ಕಾರ್ಯಕ್ರಮ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸುರೇಶ ಎಸ್‌. ಪೂಜಾರಿ ಉದ್ಘಾಟಿಸಲಿದ್ದು, ಹೊಸ್ಮಾರಿನ ಶ್ರೀ ಬಲ್ಯೊಟ್ಟು ಕ್ಷೇತ್ರದ ವಿಖ್ಯಾತಾನಂದ ಶ್ರೀಗಳು ಆರ್ಶಿವಚನ ನೀಡಲಿದ್ದಾರೆ. ಉದ್ಯಾವರ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಪಕ ಡಾ| ನಾಗರಾಜ ಪೂಜಾರಿ ಧಾರ್ಮಿಕ ಪ್ರವಚನ ನೀಡಲಿದ್ದು, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್‌. ಟಿ. ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಗೋಪಾಲ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ .

LEAVE A REPLY

Please enter your comment!
Please enter your name here