Home ಧಾರ್ಮಿಕ ಸುದ್ದಿ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ-ಶರನ್ನವರಾತ್ರಿ ಮಹೋತ್ಸವ

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ-ಶರನ್ನವರಾತ್ರಿ ಮಹೋತ್ಸವ

2074
0
SHARE

ಸಿದ್ದಾಪುರ : ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ಸೆ. 29ರಿಂದ ಅ. 8ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಶರನ್ನವ ರಾತ್ರಿ ಮಹೋತ್ಸವ ಜರಗಲಿದೆ.

ಅ. 5ರಂದು ರಾತ್ರಿ ಶಾರದಾ ದೇವಿ ಪ್ರತಿಷ್ಠೆ, ವಿಶೇಷ ಪೂಜೆ, ಅ. 7ರಂದು ನವಮಿ. ಮಧ್ಯಾಹ್ನ ಚಂಡಿಕಾ ಹವನ, ರಾತ್ರಿ ಬೆಳ್ಳಿ ರಥೋತ್ಸವ, ರಥಬೀದಿ ಹಾಗೂ ರಾಜ ಬೀದಿಯಲ್ಲಿ ಲಾಲ್ಕಿ ಉತ್ಸವ, ಅ. 8ರಂದು ಉದಯಪೂರ್ವ ಕದಿರು
ಮಹೋತ್ಸವ, ಕಣಜ ತುಂಬಿಸುವುದು, ದಶಮಿ ಪೂಜೆ, ವಿಜಯೋತ್ಸವ, ಸಂಜೆ ದಶಮಿ ಉತ್ಸವ ನಡೆಯಲಿದೆ. ಪ್ರತಿದಿನ ರಾತ್ರಿ ಭಜನೆ, ಯಕ್ಷಗಾನ, ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ ಎಂದು ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್‌. ಸಚ್ಚಿದಾನಂದ ಚಾತ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here