Home ಧಾರ್ಮಿಕ ಸುದ್ದಿ ಆ. 17: ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಸಿಂಹ ಸಂಕ್ರಮಣ ಉತ್ಸವ

ಆ. 17: ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಸಿಂಹ ಸಂಕ್ರಮಣ ಉತ್ಸವ

1642
0
SHARE

ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆ.17ರಂದು ಸಿಂಹ ಸಂಕ್ರಮಣ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಮದುಮಕ್ಕಳ ಜಾತ್ರೆ ಎನ್ನುವ ಪ್ರತೀತಿ ಪಡೆದಿರುವ ಸಿಂಹ ಸಂಕ್ರಮಣದಂದು ಮದುಮಕ್ಕಳು, ಮಹಿಳೆಯರು ಹೆಚ್ಚಾಗಿ ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ದೇಗುಲಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರೂ ಸಂಖ್ಯೆಯಲ್ಲಿ ಭಕ್ತ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಳುದರಿಂದ ಭಕ್ತರ ಅನುಕೂಲಕಾಗಿ ದೇವಸ್ಥಾನವು ಸಿದ್ದತೆ ನಡೆಸುತ್ತಿದೆ.

ಈ ಭಾರೀ ದೇಗುಲಕ್ಕೆ ಸುಮಾರು 10ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನೀರೀಕ್ಷೆ ಇದ್ದು, ಪ್ರತಿಯೊಬ್ಬ ಭಕ್ತರಿಗೂ ದೇವರ ದರ್ಶನದೊಂದಿಗೆ ಅನ್ನಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶ್ರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಎಸ್‌. ಸಚ್ಚಿದಾನಂದ ಚಾತ್ರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here