Home ಧಾರ್ಮಿಕ ಸುದ್ದಿ ಸಿದ್ದಾಪುರ: ನಗರ ಭಜನೋತ್ಸವ ಉದ್ಘಾಟನೆ; ಪುರ ಮೆರವಣಿಗೆ

ಸಿದ್ದಾಪುರ: ನಗರ ಭಜನೋತ್ಸವ ಉದ್ಘಾಟನೆ; ಪುರ ಮೆರವಣಿಗೆ

1060
0
SHARE

ಸಿದ್ದಾಪುರ: ಸಿದ್ದಾಪುರ ವಲಯ ಭಜನಾ ಮಂಡಳಿಗಳ ಒಕ್ಕೂಟದವತಿಯಿಂದ ಸಿದ್ದಾಪುರ ನಗರ ಭಜನೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿ. 7ರಂದು ನಗರ ಭಜನೆ ಉತ್ಸವ ಕಾರ್ಯಕ್ರಮ ಹಾಗೂ ಪುರ ಮೆರವಣಿಗೆ ಸಿದ್ದಾಪುರ ಶ್ರೀ ದಶಭುಜ ಮಹಾಗಣಪತಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.

ಸಿದ್ದಾಪುರ ಶ್ರೀ ದಶಭುಜ ಮಹಾಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡು ಸಿದ್ದಾಪುರ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಕುಣಿತ, ಅನಂತರ ಮುಖ್ಯ ಬೀದಿಯಲ್ಲಿ ಸಾಗಿ ಜನತಾ ಕಾಲೋನಿ, ಪೇಟೆಗಳ ಮೂಲಕ ಸಾಗಿತು. ಸಿದ್ದಾಪುರ ಕೆಳಪೇಟೆ ಶ್ರೀ ದುರ್ಗಾಹೊನ್ನಮ್ಮ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.

LEAVE A REPLY

Please enter your comment!
Please enter your name here