Home ಧಾರ್ಮಿಕ ಸುದ್ದಿ ಎಳ್ಳಮಾವಾಸ್ಯೆ ಜಾತ್ರೆ, ತೀರ್ಥಸ್ನಾನ ಸಂಪನ್ನ

ಎಳ್ಳಮಾವಾಸ್ಯೆ ಜಾತ್ರೆ, ತೀರ್ಥಸ್ನಾನ ಸಂಪನ್ನ

957
0
SHARE

ಸಿದ್ದಾಪುರ : ಶ್ರೀ ಕ್ಷೇತ್ರ ಹೊಳೆಶಂಕರ ನಾರಾಯಣದಲ್ಲಿ ಡಿ. 26ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಿರಂತರವಾದ ಪೂಜೆಯೊಂದಿಗೆ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಮತ್ತು ತೀರ್ಥಸ್ನಾನ ಸಂಪನ್ನಗೊಂಡಿತು.

ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಅಂಪಾರು ರಂಜನಾ ಆರ್‌.ಪ್ರಭು ಮತ್ತು ಬಳಗದವರಿಂದ ಭಜನಾ ಹಾಡುಗಳು, ಕಾರ್ಕಳ ಯೋಗೀಶ್‌ ಕಿಣಿ ಮತ್ತು ಬಳಗದವರಿಂದ ಭಕ್ತಿ ಗಾನಸುಧೆ, ಮಧ್ಯಾಹ್ನ ಮಹಾ ಮಂಗಳಾರತಿ, ಅನ್ನ ಸಂತರ್ಪಣೆ, ಅನಂತರ ರತ್ನಾಕರ ನಾಯಕ್‌ ಮತ್ತು ಬಳಗ ಉಳ್ಳೂರು 74 ಇವರಿಂದ ಭಜನಾ ಹಾಡುಗಳು, ಶ್ರೀ ವಿಠೊಬ ಮಹಿಳಾ ಕುಣಿತ ಭಜನಾ ಮಂಡಳಿ ಅಂಬಲಪಾಡಿ ಉಡುಪಿ ಇವರಿಂದ ಭಜನೆ, ಶ್ರೀ ಭಗವತ್ತ್ ಭಜನ ಮಂಡಳಿ ಕೋಟತಟ್ಟು ಪಡುಕೆರೆ ಇವರಿಂದ ಕುಣಿತ ಭಜನೆ ಜರಗಿದವು.

ನಾಡೋಜ ಡಾ| ಜಿ. ಶಂಕರ್‌ ಹಾಗೂ ಅವರ ಸಹೋದರ ಶಿವಣ್ಣ ಸೇರಿದಂತೆ ಆಡಳಿತ ಮಂಡಳಿ, ಅಭಿವೃದ್ಧಿ ಮಂಡಳಿ ಹಾಗೂ ಭಕ್ತರು ಭಾಗವಹಿಸಿದರು. ಕಂಕಣ ಸೂರ್ಯಗ್ರಹಣದ ನಡುವೆಯು ಸುಮಾರು 10ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ವಾರಾಹಿ ನದಿಯ ಮಧ್ಯೆ ಇರುವ ಶುಕ್ತಿಮತೀ ತೀರ್ಥ ದಲ್ಲಿ ಸ್ನಾನಗೈದು ದೇವರ ದರ್ಶನ ಪಡೆದರು. ಮಧ್ಯಾಹ್ನ ಸುಮಾರು 5ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಇತಿಹಾಸದಲ್ಲಿಯೇ ಈ ಭಾರೀ ಆತೀ ಹೆಚ್ಚು ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿದರು.

LEAVE A REPLY

Please enter your comment!
Please enter your name here