Home ಧಾರ್ಮಿಕ ಸುದ್ದಿ ‘ಶ್ರೀಮದ್‌ ಭಾಗವತವು ಜ್ಞಾನನಿಧಿ’

‘ಶ್ರೀಮದ್‌ ಭಾಗವತವು ಜ್ಞಾನನಿಧಿ’

ಬೆಳದಿಂಗಳ ಚಿಂತನ ಚಾವಡಿ

834
0
SHARE

ಕಾವೂರು: ಶ್ರೀಮದ್‌ ಭಾಗವತವು ಬಹು ಪ್ರಾಚೀನ ಪರಂಪರೆಯ ಜ್ಞಾನನಿಧಿ. ಈ ವೇದ ಉಪನಿಷತ್‌ ಸಾಗರವನ್ನು ಸಾಮಾನ್ಯನಿಗೂ ಅರಿಯುವ ಹಾಗೆ ವ್ಯಾಸರು ತಿಳಿಸಿದ್ದಾರೆ ಎಂದು ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಂಗಳೂರು ಶಾಖಾಮಠದಲ್ಲಿ ನಡೆದ ಬೆಳದಿಂಗಳ ಚಿಂತನ ಚಾವಡಿ ಹಾಗೂ ಶ್ರೀಮದ್‌ ಭಾಗವತ ಸಪ್ತಾಹದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ಅಂತರಂಗ ಶುದ್ಧಿಯಿಂದ ಸ್ವಾಧ್ಯಾಯಗಳನ್ನು ಮಾಡಬೇಕು. ಅದರಿಂದ ಬದುಕಿನ ಅನ್ವೇಷಣೆಯ ಸತ್ಯತೆ ಗೋಚರವಾಗುತ್ತದೆ. ಭಾಗವತದ ತತ್ವ ಚಿಂತನೆ ಅದ್ಭುತ ಪರಿಣಾಮ ಬೀರುತ್ತದೆ. ನಮ್ಮಲ್ಲಿರುವ ಅಸುರೀ ಗುಣಗಳೇ ರಾಕ್ಷಸರು. ವ್ಯಾಮೋಹ, ಅಹಮ್ಮಿಕೆಯು ದೈವತ್ವವನ್ನು ಮರೆಸುತ್ತದೆ. ಅದರಿಂದ ಅನೇಕ ದುಃಖಗಳು ಬರುತ್ತವೆ. ಆ ನಿಟ್ಟಿನಲ್ಲಿ ಸತ್ಸಂಗ, ಸತ್‌ ಚಿಂತನೆ , ಸದ್ಭಾವನೆ ಗಳನ್ನು ಅಳವಡಿಸಿಕೊಳ್ಳಬೇಕು. ಕಥಾ ಶ್ರವಣದಿಂದ ಸಂಸ್ಕಾರ ಹೊಂದಲ್ಪಡುತ್ತವೆ. ಸಂಸರ್ಗಿಯಾಗಿ, ವಿರಾಗಿಯಾಗಿ, ಮುಕ್ತಿಯ ಪಥವನ್ನು ಹೊಂದುತ್ತಾನೆ. ಅಂತಹ ಜ್ಞಾನ ಸಾಧನಮಾರ್ಗದಲ್ಲಿ ನಾವುಗಳು ಬದುಕಬೇಕು ಎಂದರು.

ಜೀವನ ಜಾಗೃತ
ಶ್ರೀಮದ್‌ ಭಾಗವತ ಪ್ರವಚನ ಸಪ್ತಾಹ ನಡೆಸಿದ ವಿದ್ವಾಂಸ ವಾಗೀಶ್ವರೀ ಶಿವರಾಮ್‌ ಮಾತನಾಡಿ, ಭಾಗವತ ಅಧ್ಯಯನ ನಿರಂತರವಾಗಿ ಮಾಡುವುದರಿಂದ ಅದರ ಸಂದೇಶಗಳು ಮನುಷ್ಯ ಜೀವನವನ್ನು ಜಾಗೃತಗೊಳಿಸುತ್ತದೆ. ವೇದ ಪುರಾಣಗಳಲ್ಲಿನ ವಿಚಾರಗಳು ವೈಜ್ಞಾನಿಕವಾಗಿಯೂ ಶ್ರುತಪಟ್ಟಿದೆ ಎಂದು ಹೇಳಿದರು. ಶ್ರೀ ಮಹಾಲಿಂಗೇಶ್ವರ ವಿನಾಯಕ ಭಜನ ಮಂಡಳಿಯವರು ಭಜನೆ ನಡೆಸಿಕೊಟ್ಟರು. ಪಿ.ಎಸ್‌. ಪ್ರಕಾಶ್‌ ಸ್ವಾಗತಿಸಿದರು. ಬಿಜಿಎಸ್‌ ಸಂಸ್ಥೆಯ ಆಡಳಿತಾಧಿಕಾರಿ ಸುಬ್ಬ ಕಾರಡ್ಕ ವಂದಿಸಿದರು. ನರಸಿಂಹ ಕುಲಕರ್ಣಿ ನಿರೂಪಿಸಿದರು.

LEAVE A REPLY

Please enter your comment!
Please enter your name here