Home ಧಾರ್ಮಿಕ ಸುದ್ದಿ ಸೆ. 29ರಂದು ಭೋಜನ ಶಾಲೆ ಉದ್ಘಾಟನೆ

ಸೆ. 29ರಂದು ಭೋಜನ ಶಾಲೆ ಉದ್ಘಾಟನೆ

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ

1839
0
SHARE

ಬ್ರಹ್ಮಾವರ : ನೀಲಾವರ ಮಹತೋಭಾರ ಶ್ರೀ ಮಹಿಷ ಮರ್ದಿನೀ ದೇವಸ್ಥಾನದಲ್ಲಿ ಸೆ. 29 ರಂದು ಬೆಳಗ್ಗೆ 10 ಗಂಟೆಗೆ ನಿತ್ಯ ಅನ್ನದಾನದ ನೂತನ ಭೋಜನ ಶಾಲೆಯ ಉದ್ಘಾಟನೆ ಮತ್ತು ಸಮಗ್ರ ಜೀಣೋದ್ಧಾರಕ್ಕೆ ದಾರು ಹಾಗೂ ಶಿಲಾ ಮುಹೂರ್ತ ನೆರವೇರಲಿದೆ.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳುವರು.
ಕಾರಣಿಕ ಕ್ಷೇತ್ರ ಸೀತಾ ನದಿ ದಡದಲ್ಲಿರುವ ಕಾರಣಿಕ ಮತ್ತು ಐತಿಹಾಸಿಕ ಹಿನ್ನೆಲೆ
ಇರುವ ನೀಲಾವರ ದೇವಸ್ಥಾನವು ಸಮಗ್ರ ಜೀರ್ಣೋದ್ಧಾರದ ಹಂತದಲ್ಲಿದೆ. ಶಿಲಾ ಶಾಸನಗಳ ಪ್ರಕಾರ ಸುಮಾರು 6 ಶತಮಾನಗಳ ಹಿಂದೆ ಜೀರ್ಣೋದ್ಧಾರಗೊಂಡಿರುವ ಉಲ್ಲೇಖವಿದ್ದು, ಈಗ ಸಮಗ್ರ ಅಭಿವೃದ್ಧಿಯ ಸಂಭ್ರಮದಲ್ಲಿದೆ.

15 ಕೋ. ರೂ. ಅಧಿಕ ಮೊತ್ತದ ಜೀರ್ಣೋದ್ಧಾರ ಕಾರ್ಯಕ್ಕೆ ಶರನ್ನವ ರಾತ್ರಿಯ ಪ್ರಾರಂಭದ ದಿನ ಚಾಲನೆ ದೊರೆಯಲಿದೆ. ಶರನ್ನವರಾತ್ರಿ ಸೆ. 29ರಿಂದ ಅ. 8ರ ವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದ್ದು, ಪ್ರತಿನಿತ್ಯ ದುರ್ಗಾ ಹೋಮ, ಭಜನೆ ನಡೆಯಲಿದೆ. ಅ. 8ರಂದು ಚಂಡಿಕಾಯಾಗ, ಸಾಮೂಹಿಕ ದೀಪ ನಮಸ್ಕಾರ ಜರಗಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ರಘುರಾಮ
ಮಧ್ಯಸ್ಥ ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here