Home ಧಾರ್ಮಿಕ ಸುದ್ದಿ  ಶ್ರೀಲಕ್ಷ್ಮೀ ಪೂಜೆ ವ್ರತಾಚರಣೆ, “ಪ್ರಾಂಜಲ ಮನಸ್ಸಿನ ಕಾರ್ಯಹಿತ’

 ಶ್ರೀಲಕ್ಷ್ಮೀ ಪೂಜೆ ವ್ರತಾಚರಣೆ, “ಪ್ರಾಂಜಲ ಮನಸ್ಸಿನ ಕಾರ್ಯಹಿತ’

2418
0
SHARE

ಮಾಣಿಲ : ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡುವುದರ ಮೂಲಕ ಗೃಹಿಣಿಯರು ಮಾತೃತ್ವ ಶಕ್ತಿಯ ಮಹತ್ವವನ್ನು ಲೋಕಕ್ಕೆ ಸಮರ್ಪಿಸಬೇಕಾಗಿದೆ. ಪ್ರಾಂಜಲ ಮನಸ್ಸು, ಭಾವನೆಯಿದ್ದಾಗ ಮಾಡುವ ಕಾರ್ಯ ಸಮಾಜ ಹಿತವಾಗಿರುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.

ಅವರು ರವಿವಾರ ಶ್ರೀಕ್ಷೇತ್ರದಲ್ಲಿ ಒಂದು ಮಂಡಲ ಸಾಮೂಹಿಕ ಶ್ರೀ ಲಕ್ಷ್ಮೀಪೂಜೆ ವ್ರತಾ ಚರಣೆ ಧಾರ್ಮಿಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿದ್ದ ರಾಮಕೃಷ್ಣ ಭಟ್‌ ಬೊಳಂತಿಮೊಗರು ಮಾತನಾಡಿ, ಶ್ರೀಧಾಮದ ಮೂಲಕ ಮೌನವಾಗಿ ಸಾಮಾಜಿಕ ಕ್ರಾಂತಿಯಾಗಿದೆ ಎಂದರು.

ರಮೇಶ್‌ ಕುಲಾಲ್‌ ಬಿ.ಸಿ. ರೋಡ್‌, ರಾಕೇಶ್‌ ಮಂಗಳೂರು, ಪೆರ್ಲ ಕೋ-ಆಪ ರೇಟಿವ್‌ ಸಹಕಾರಿ ನಿ.ದ ರಾಮಕೃಷ್ಣ ನಾಯಕ್‌ ಉಪಸ್ಥಿತರಿದ್ದರು. ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಸದಸ್ಯೆ ರೇವತಿ ಸ್ವಾಗತಿಸಿ, ಸತ್ಯವತಿ ವಂದಿಸಿದರು. ಕಾರ್ಯದರ್ಶಿ ಗೀತಾ ಪುರುಷೋತ್ತಮ್‌ ನಿರೂಪಿಸಿದರು.

ಶ್ರೀಕ್ಷೇತ್ರದಲ್ಲಿ ಬೆಳಗ್ಗೆ ಗಣಪತಿ ಹವನ, ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ಶ್ರೀಗುರು ಪೂಜೆ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಬಾಲಭೋಜನ, ಕನಕಧಾರಾ ಯಾಗ, ಕುಂಕುಮಾರ್ಚನೆ, ಯಾಗ ಪೂರ್ಣಾಹುತಿ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಶ್ರೀ ದುರ್ಗಾ ಪೂಜೆ, ಆಶ್ಲೇಷ ಬಲಿ, ಶ್ರೀ ವಿಠೊಭ ರುಕ್ಮಿಣಿ ಧ್ಯಾನ ಮಂದಿರದಲ್ಲಿ ಭಜನ ಸಂಕೀರ್ತನೆ, ಶ್ರೀಲಕ್ಷಿ$¾à ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here