ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವರ್ಷಾವಧಿ ಉತ್ಸವ ಬುಧವಾರ ಆರಂಭಗೊಂಡಿದ್ದು, ಮಾ. 6ರ ವರೆಗೆ ನಡೆಯಲಿದೆ.
ಬುಧವಾರ ಬೆಳಗ್ಗೆ 9ಕ್ಕೆ ಗುರುಪ್ರಾರ್ಥನೆ ಮತ್ತು ಕಾರ್ಯಕ್ರಮಗಳು ಆರಂಭ ವಾದವು. 11.05ಕ್ಕೆ ಧ್ವಜಾರೋಹಣ, 12.30ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಭಜನ ಕಾರ್ಯಕ್ರಮ, 8ಕ್ಕೆ ಮಹಾಪೂಜೆ, ಬಲಿ ಉತ್ಸವ ನಡೆಯಿತು. ಫೆ.28 ರಿಂದ ಮಾ.2 ರವರೆಗೆ ಬೆಳಗ್ಗೆ 10.30ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ. 3ರಂದು ಬೆಳಗ್ಗೆ 8.15ಕ್ಕೆ ಮಹಾರುದ್ರ ಹೋಮ ಆರಂಭ, ಹಗಲೋತ್ಸವ ಬಲಿ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಮಾ. 4ರಂದು ಬೆಳಗ್ಗೆ 11ಕ್ಕೆ ಮಹಾ ರುದ್ರಾಭಿಷೇಕ, ಶತಸೀಯಾಳ ಅಭಿಷೇಕ, ಮಹಾಪೂಜೆ, ರಾತ್ರಿ 8ಕ್ಕೆ ರಥೋತ್ಸವ, ವಿಷ್ಣುಬಲಿ, ರಾತ್ರಿ 1ಕ್ಕೆ ಶಿವ ಬಲಿ, ಮಹಾ
ಶಿವರಾತ್ರಿ ಜಾಗರಣೆ ಬಲಿ, ಕಟ್ಟೆ ಪೂಜೆ, ರಥೋತ್ಸವ, ಕೆರೆದೀಪ, ಮಂಟಪ ಪೂಜೆ ನಡೆಯಲಿವೆ. ಮಾ. 5ರಂದು ಅಪರಾಹ್ನ 2.30ಕ್ಕೆ ಜಲಾಭಿಷೇಕ, ಮಹಾಪೂಜೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ 7ರಿಂದ ಬಲಿಪೂಜೆ, ಅವಭೃಥ ಸ್ನಾನ, ಮಾ. 6ರಂದು ಮಧ್ಯಾಹ್ನ 11ಗಂಟೆಗೆ ಧ್ವಜ ಅವರೋಹಣ ನಡೆಯಲಿದೆ. ಮಾ. 2ರಿಂದ ಮಾ. 4ರ ವರೆಗೆ ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬುಧವಾರ ನಡೆದ ಧ್ವಜಾರೋಹಣ ವೇಳೆ ಕ್ಷೇತ್ರದ ಪ್ರಮುಖರಾದ ಜನಾರ್ದನ ಪೂಜಾರಿ, ಎಚ್.ಎಸ್. ಸಾಯಿರಾಂ, ಪದ್ಮರಾಜ್ ಆರ್., ಮಾಧವ ಸುವರ್ಣ, ರವಿಶಂಕರ್ ಮಿಜಾರ್, ಮಹೇಶ್ಚಂದ್ರ, ಉರ್ಮಿಳಾ ರಮೇಶ್ ಕುಮಾರ್, ಶೇಖರ್ ಪೂಜಾರಿ, ಡಾ| ಬಿ.ಜಿ. ಸುವರ್ಣ, ದೇವೇಂದ್ರ ಪೂಜಾರಿ, ಡಿ.ಡಿ. ಕಟ್ಟೆಮಾರ್ ಮೊದಲಾದವರು ಉಪಸ್ಥಿತರಿದ್ದರು.