ಉಡುಪಿ: ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆ ಅಂಗವಾಗಿ ನೂತನ ಮುಖಮಂಟಪ ಗರ್ಭಿತ ಕಾಷ್ಠಶಿಲ್ಪಾಧಾರಿತ ಸುತ್ತುಪೌಳಿಗೆ ಅನ್ವಯವಾಗುವಂತೆ ಪರಿವಾರ ದೇವರಾದ ಶ್ರೀ ಪ್ರಸನ್ನ ಗಣಪತಿ ಮತ್ತು ಶ್ರೀ ಬಾಲಸುಬ್ರಹ್ಮಣ್ಯ ದೇವರಿಗೆ ನೂತನ ಕಾಷ್ಠಶಿಲ್ಪಾಧಾರಿತ ಗುಡಿ ನಿರ್ಮಿಸುವ ಸಂಕಲ್ಪ ಹೊಂದಿದ್ದು, ಇದರ ಪೂರ್ವಭಾವಿಯಾಗಿ ಶಿಲಾನ್ಯಾಸ ನೆರವೇರಿತು.
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರು ಶಿಲಾನ್ಯಾಸ ನೆರವೇರಿಸಿದರು. ವೇ|ಮೂ| ಕೃಷ್ಣಮೂರ್ತಿ ತಂತ್ರಿ ಅವರು ಧಾರ್ಮಿಕ ವಿಧಿವಿಧಾನದ ನೇತೃತ್ವ ವಹಿಸಿದ್ದರು. ಕಾಷ್ಠಶಿಲ್ಪಿ ಜಗದೀಶ ಆಚಾರ್ಯ, ಕಾಮಗಾರಿಯ ಉಸ್ತುವಾರಿ ಸುದರ್ಶನ್, ಶಿಲಾ ಕಾಮಗಾರಿಯ ಶಿಲ್ಪಿ ಸುರೇಂದ್ರ, ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್, ಪ್ರಜ್ಞಾ ಶಾಲೆಯ ಪ್ರಾಂಶುಪಾಲೆ ಉಷಾ ರಮಾನಂದ, ಜೆಎಂಟಿ ಟ್ರಾವೆಲ್ಸ್ನ ಆನಂದ ಬಾಯರಿ ಮೊದಲಾದವರು ಉಪಸ್ಥಿತರಿದ್ದರು.