Home ಧಾರ್ಮಿಕ ಸುದ್ದಿ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ

ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ

1110
0
SHARE

ಕುಂಬಳೆ: ಕಟಪಾಡಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪೂಜ್ಯ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮಿಗಳವರ ಚಾತುರ್ಮಾಸ್ಯ ವ್ರತಾಚರಣೆಯು ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ ಜು.27ರಿಂದ ಸೆ.25ರ ತನಕ ಜರಗಲಿದೆ.

ಈ ಕುರಿತು ನಡೆದ ವಿಶೇಷ ಸಭೆಯಲ್ಲಿ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆಯಂಗಡಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಪಿ.ವಿ.ಗಂಗಾಧರ ಆಚಾರ್ಯ ಉಡುಪಿ, ಗೌರವ ಪ್ರಧಾನಕಾರ್ಯದರ್ಶಿಯಾಗಿ ಲೋಕೇಶ್‌ ಎಂ.ಬಿ ಆಚಾರ್‌ ಕಂಬಾರು, ಪ್ರಧಾನ ಕಾರ್ಯದರ್ಶಿಯಾಗಿ ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ, ಕೋಶಾಧಿಕಾರಿಯಾಗಿ ಬಂಬ್ರಾಣ ಯಜ್ಞೆಶ ಆಚಾರ್ಯ ಮಂಗಳೂರು ಆಯ್ಕೆಗೊಂಡರು. ಸಮಿತಿಯ ಉಪಾಧ್ಯಕ್ಷರುಗಳಾಗಿ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಬಿ. ಸುಂದರ ಆಚಾರ್ಯ, ಬೆಳುವಾಯಿ, ಎನ್‌. ಪರಮೇಶ್ವರ ಆಚಾರ್ಯ ನೀರ್ಚಾಲು, ಕೆ. ಹರೀಶ್‌ ಆಚಾರ್ಯ ಕಾರ್ಕಳ, ಕೆ. ಕೇಶವ ಆಚಾರ್ಯ, ಮಂಗಳೂರು, ನವೀನ್‌ ಆಚಾರ್ಯ ಪಡುಬಿದ್ರೆ, ರತ್ನಾಕರ ಆಚಾರ್ಯ ಕಟ್ಟೆಮಾರ್‌ ಕಾರ್ಕಳ, ಮಂಜುನಾಥ ಆಚಾರ್ಯ ಬಡಾಕೆರೆ, ಮಧುಕರಚಂದ್ರಶೇಖರ ಆಚಾರ್ಯ, ಹೊನ್ನಾವರ, ಭಾಸ್ಕರ ಎ. ಆಚಾರ್ಯ, ಭಟ್ಕಳ, ಎ. ಶೇಖರ ಆಚಾರ್ಯ ಕಾಪು ಕೆ. ಸುಧಾಕರ ಆಚಾರ್ಯ ಕೊಲಕಾಡಿ, ಕೆ. ಸುಂದರ ಆಚಾರ್ಯ ಕೋಟೆಕಾರು, ಪಿ. ಉಮೇಶ ಆಚಾರ್ಯ ಪೋಳ್ಯ ಪುತ್ತೂರು,ಎ. ಸುಧಾಕರ ಆಚಾರ್ಯ ಎಡನೀರು ಪುತ್ತೂರು, ಜೆ. ದಿವಾಕರ ಆಚಾರ್ಯ ಅಡೂರು,ಹರಿಶ್ಚಂದ್ರ ಎನ್‌. ಆಚಾರ್ಯ ಬೆಂಗಳೂರು, ಮಧು ಆಚಾರ್ಯ ಮೂಲ್ಕಿ, ಯು. ಕೆ. ಎಸ್‌ ಸೀತಾರಾಮ ಆಚಾರ್ಯ, ಟಿ. ಸುಧಾಕರ ಆಚಾರ್ಯ ತ್ರಾಸಿ, ವಿದ್ವಾನ್‌ ವೇ. ಬ್ರ. ಶಂಕರ ಆಚಾರ್ಯ ಪಂಡಿತ್‌ (ಕಡ್ಲಾಸ್ಕರ್‌), ಕೃಷ್ಣ ವಿ. ಆಚಾರ್ಯ ಮುಂಬಯಿ, ಶ್ರೀಧರ ವಿ.ಆಚಾರ್ಯ ಮುಂಬಯಿ,ಜಿ.ಟಿ ಆಚಾರ್ಯ ಮುಂಬಯಿ, ಸದಾನಂದ ಎಂ. ಆಚಾರ್ಯ ಕಲ್ಯಾಣಪುರ, ಕಣ್ಣಪ್ಪ ಎನ್‌ ಆಚಾರ್ಯ ಪನ್ವೇಲ್‌, ಕೆ. ಸೋಮನಾಥ ಆಚಾರ್‌ ಬೆಂಗಳೂರು, ಜನಾರ್ಧನ ಆಚಾರ್ಯ ಮೂವಾಜೆ, ಶುಭಕರ ಎನ್‌ ಆಚಾರ್ಯ ಕೊಯಂಬುತ್ತೂರು,ರಮೇಶ ರಾವ್‌, ಕೊಯಂಬುತ್ತೂರು, ಯೋಗೇಶ್‌ ವಿ. ಆಚಾರ್ಯ ಕೊಯಂಬುತ್ತೂರು, ಮಲ್ಲಿಕಾರ್ಜುನ ಆಚಾರ್‌, ಎ.ಮೋಹನ ಆಚಾರ್ಯ ಬೆಳ್ಳೂರು, ಪುರುಷೋತ್ತಮ ಆಚಾರ್ಯ, ಪುತ್ತೂರು ಇವರು ಆಯ್ಕೆಗೊಂಡರು. ಸಮಿತಿ ಕಾರ್ಯದರ್ಶಿಗಳಾಗಿ ನ್ಯಾಯವಾದಿ ಕೆ.ಎಂ. ಗಂಗಾಧರ ಆಚಾರ್ಯ ಕೊಂಡವೂರು, ಪ್ರಶಾಂತ ಬಿ ಆಚಾರ್ಯ ಕಟಪಾಡಿ, ಸುರೇಶ್‌ ಆಚಾರ್ಯ ಕಾರ್ಕಳ, ಉಡುಪಿ ಉದ್ಯಾವರ ರತ್ನಾಕರ ಆಚಾರ್ಯ ಆಯ್ಕೆಗೊಂಡರು.

ಚಾತುರ್ಮಾಸ್ಯದ ಯಶಸ್ವಿಗೆ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು. ವಿವಿಧ ಸಮಿತಿ , ಮುಖ್ಯಸ್ಥರು, ಸಂಚಾಲಕರನ್ನು ಆರಿಸಲಾಯಿತು. ಬಿ.ಸೂರ್ಯಕುಮಾರ್‌ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ ಆಚಾರ್‌ ಕಂಬಾರು ಸ್ವಾಗತಿಸಿ, ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ವಂದಿಸಿದರು.

ಜು. 27: ಚಾತುರ್ಮಾಸ್ಯ ವ್ರತ
ಜು. 27ರಂದು ಚಾತುರ್ಮಾಸ್ಯ ವ್ರತ ಸಂಕಲ್ಪ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಆ. 7ರಂದು ವೈದಿಕ ಸಮಾವೇಶ, 8ರಂದು ಜಗದ್ಗುರುಗಳ ಜನ್ಮ ವರ್ಧಂತಿ ವಿಶೇಷ ಧರ್ಮ ಸಂಸತ್ತು, ಸೆ. 9ರಂದು ಯುವ ಸಮಾವೇಶ ನಡೆ ಯ ಲಿ ದೆ. ಸೆ. 16ರಂದು ಮಹಿಳಾ ಸಮಾವೇಶ, 22ರಂದು ವಿಶೇಷ ಭೂದಾನ ಯಜ್ಞ, 25ರಂದು ಸೀಮೋಲ್ಲಂಘನ,ದಿಗ್ವಿಜಯ ಮೆರವಣಿಗೆ ಸಮಾರೋಪ ಸಮಾರಂಭ ನಡೆಯಲಿದೆ.

LEAVE A REPLY

Please enter your comment!
Please enter your name here