ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶ್ರೀಚಕ್ರ ಮಂಡಲ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ಶುಕ್ರವಾರ ನೆರವೇರಿತು.
ದುಬೈಯ ಸುದರ್ಶನ್, ಸುಜಾತಾ ಸುದರ್ಶನ್ ದಂಪತಿಗಳ ಸೇವಾರ್ಥವಾಗಿ ಕ್ಷೇತ್ರದಲ್ಲಿ ಸಮರ್ಪಿಸಲ್ಪಟ್ಟ ಈ ಪೂಜೆಯು ವೇ|ಮೂ| ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಬಿಂದು ಪ್ರಕ್ರಿಯೆಯ ಮೂಲಕ ಮಂಡಲ ರಚನೆಗೆ ಚಾಲನೆ ನೀಡಲಾಯಿತು. ಸಂಜೆ ಪೂಜೆಯು ಕ್ಷೇತ್ರದಲ್ಲಿ ನೂತನವಾಗಿ ರಚಿಸಲಾದ ಸರ್ವಾಲಂಕೃತ ಮಂಟಪದಲ್ಲಿ ಆರಂಭಗೊಂಡು ರಾತ್ರಿ ಮಹಾಪೂಜೆ, ಆರಾಧನೆಗಳು, ಮಹಾ ಅನ್ನಸಂತರ್ಪಣೆ ಜರಗಿತು.