Home ಧಾರ್ಮಿಕ ಕಾರ್ಯಕ್ರಮ ಶ್ರೀ ವೆಂಕಟರಮಣ ದೇಗುಲದ ಸಣ್ಣ ರಥೋತ್ಸವ, ಶ್ರೀ ದೇವರ ಮೃಗಬೇಟೆ ಉತ್ಸವ 

ಶ್ರೀ ವೆಂಕಟರಮಣ ದೇಗುಲದ ಸಣ್ಣ ರಥೋತ್ಸವ, ಶ್ರೀ ದೇವರ ಮೃಗಬೇಟೆ ಉತ್ಸವ 

2202
0
SHARE
ಮಹಾನಗರ: ಮಂಗಳೂರು ರಥೋತ್ಸವದ ಪ್ರಯುಕ್ತ ದೇವರ ಮೃಗಬೇಟೆ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಮಹಾನಗರ: ಗೌಡ ಸಾರಸ್ವತ ಸಮಾಜದ ದೇವಾಲಯಗಳಲ್ಲೊಂದಾದ ಮಂಗಳೂರಿನ ಶ್ರೀ ವೆಂಕಟರಮಣ ದೇಗುಲ ಸಣ್ಣ ರಥೋತ್ಸವದ ಪ್ರಯುಕ್ತ ದೇವರ ಮೃಗಬೇಟೆ ಉತ್ಸವ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.

ಉತ್ಸವವು ಮಹಾಮಾಯಾ ರಸ್ತೆಯಾಗಿ ಸಾಗಿ ಡೊಂಗರಕೇರಿ ಕಟ್ಟೆಗೆ ತಲುಪಿದ ಬಳಿಕ ಬಿಲ್ಲು ಹಾಗೂ ಬಾಣದಿಂದ ಶ್ರೀ ದೇವರು ಸಾಂಕೇತಿಕವಾಗಿ ಬೇಟೆಯಾಡುವ ಪ್ರಸಂಗವನ್ನು ವೀಕ್ಷಿಸಲು ಸಾವಿರಾರು ಸಮಾಜ ಬಾಂಧವರು ಭಾಗವಹಿಸಿದ್ದರು.

ಬೇಟೆಯ ಬಳಿಕ ಮೃಗವಾಗಿ ಸೇವೆ ಸಲ್ಲಿಸಿದ ಇಬ್ಬರು ಸ್ವಯಂಸೇವಕರು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಎಲ್ಲ ಪೂಜಾ ವಿಧಿಗಳು ದೇಗುಲದ ತಂತ್ರಿಗಳಾದ ಪಂಡಿತ್‌ ನರಸಿಂಹ ಆಚಾರ್ಯ ಅವರ ನೇತೃತ್ವದಲ್ಲಿ ನಡೆದವು. ಪ್ರಧಾನ ಅರ್ಚಕರಾದ ಹರೀಶ್‌ ಭಟ್‌, ನರಸಿಂಹ ಭಟ್‌, ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಜಯರಾಜ ಪೈ ಹಾಗೂ ಪದ್ಮನಾಭ ಪೈ ಮೊದಲಾದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here