Home ಧಾರ್ಮಿಕ ಕ್ಷೇತ್ರಗಳು ಕಾಶಿ ವಿಶ್ವನಾಥನ ದರ್ಶನ ಭಾಗ್ಯದ ಫಲ ನೀಡುವ Shishileshwaraನ ನಿತ್ಯ ಪೂಜಾ ದರ್ಶನ ನಿಮಗಾಗಿ |...

ಕಾಶಿ ವಿಶ್ವನಾಥನ ದರ್ಶನ ಭಾಗ್ಯದ ಫಲ ನೀಡುವ Shishileshwaraನ ನಿತ್ಯ ಪೂಜಾ ದರ್ಶನ ನಿಮಗಾಗಿ | Belthangady

167
0
SHARE

ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ನಿಸರ್ಗ ಸೌಂದರ್ಯ ಭರಿತ ಊರೇ ಶಿಶಿಲ. ಬೆಳ್ತಂಗಡಿ ಗ್ರಾಮದ ಗಡಿ ಗ್ರಾಮವೂ ಇದಾಗಿದೆ. ಇಲ್ಲಿ ಸ್ವಯಂಭು ಲಿಂಗವಾಗಿ ಶಂಭು ಅವತರಿಸಿ ಶಿಶಿಲೇಶ್ವರ ಎಂಬ ಹೆಸರಿನಿಂದ ಭಕ್ತ ಜನರ ಇಷ್ಟಾರ್ಥಗಳನ್ನು ಸಂಪನ್ನಗೊಳಿಸುತ್ತಿದ್ದಾನೆ. 700 ವರ್ಷಗಳ ಭವ್ಯ ಇತಿಹಾಸವಿರುವ ಈ ದೇವಸ್ಥಾನ ನಿಸರ್ಗದ ರಮ್ಯ ಕೊಡುಗೆ ಎಂದರೆ ತಪ್ಪಾಗಲಾರದು. ದೇವಸ್ಥಾನದ ಪಕ್ಕದಲ್ಲೇ ಝುಳು ಝುಳು ನಿನಾದದೊಂದಿಗೆ ಹರಿಯುವ ಕಪಿಲಾ ನದಿ ಇಲ್ಲಿರುವ ‘ಮತ್ಸ್ಯತೀರ್ಥ’ದಲ್ಲಿ ನೆಲೆಯಾಗಿರುವ ಅಸಂಖ್ಯ ‘ಪೆರುವೇಲ್’ ಜಾತಿಯ ವಿಶಿಷ್ಟ ಮೀನುಗಳು ಈ ಕ್ಷೇತ್ರಕ್ಕೆ ಮತ್ಸ್ಯಕ್ಷೇತ್ರವೆಂಬ ಅಭಿದಾನವನ್ನೂ ಒದಗಿಸಿಕೊಟ್ಟಿವೆ. ಒಟ್ಟಿನಲ್ಲಿ ಪ್ರಕೃತಿಗೂ ಶಿವನಿಗೂ ಅವಿನಾಭಾವ ಸಂಬಂಧ. ಆತ ಸರ್ಪಭೂಷಣ, ಗಂಗಾಧರ, ಹಿಮ ಪರ್ವತ ವಾಸಿ ಹೀಗೆ ಪ್ರಕೃತಿ ಪ್ರಿಯ ಶಂಕರ ನಿಸರ್ಗ ಸೌಂದರ್ಯದ ನೆಲವೀಡಾಗಿರುವ ಈ ಊರಿನಲ್ಲಿ ಶಿಶಿಲೇಶ್ವರನಾಗಿ ನೆಲೆಯಾಗಿದ್ದಾನೆ. ಬನ್ನಿ ಶಿಶಿಲೇಶ್ವರನ ನಿತ್ಯ ಪೂಜೆಯನ್ನು ಕಣ್ತುಂಬಿಕೊಳ್ಳೋಣ ಹಾಗೂ ಕ್ಷೇತ್ರದ ಕ್ಷಿಪ್ರ ದರ್ಶನವನ್ನು ಮಾಡೋಣ.

LEAVE A REPLY

Please enter your comment!
Please enter your name here