Home ಧಾರ್ಮಿಕ ಸುದ್ದಿ ಶ್ರೀ ರಾಮಚಂದ್ರತೀರ್ಥ ಸ್ವಾಮೀಜಿ ಆರಾಧನೆ

ಶ್ರೀ ರಾಮಚಂದ್ರತೀರ್ಥ ಸ್ವಾಮೀಜಿ ಆರಾಧನೆ

1966
0
SHARE

ಕುಂದಾಪುರ: ಕುಂದಾಪುರ ಶ್ರೀ ವ್ಯಾಸರಾಜ ಸಂಸ್ಥಾನದ 21ನೇ ಪರಮ ಪೂಜ್ಯ ಶ್ರೀ ರಾಮಚಂದ್ರ ತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವ ಶುಕ್ರವಾರ ಕುಂದಾಪುರದ ಮೂಲ ಮಠವಾದ ವ್ಯಾಸರಾಜ ಮಠದಲ್ಲಿ ನಡೆಯಿತು. ಯತಿಗಳಾದ ಶ್ರೀ ಲಕ್ಷ್ಮೀನ್ದ್ರ ತೀರ್ಥ ಶ್ರೀಪಾದರು ಆರಾಧನಾ ಮಹೋತ್ಸವ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಪಾದಪೂಜೆ ಮತ್ತು ಮುದ್ರಧಾರಣೆ ಕಾರ್ಯಕ್ರಮ ಜರಗಿತು.

ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ, ಪ್ರ. ಕಾರ್ಯದರ್ಶಿ ಕೆ. ಭಾಸ್ಕರ್‌, ಕೋಶಾಧಿಕಾರಿ ಪರಮೇಶ್ವರ್‌ ಜಿ.ಬಿ., ಶ್ರೀ ವ್ಯಾಸರಾಜ ಸೇವಾ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಗಾಣಿಗ, ಕೋಶಾಧಿಕಾರಿ ಗಣಪಯ್ಯ ಗಾಣಿಗ, ಮಾಜಿ ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ ಬೀಜಾಡಿ, ಹಿರಿಯರಾದ ಸುಧೀರ್‌ ಪಂಡಿತ್‌, ಗೋಪಾಲ ಚೆಲ್ಲಿಮಕ್ಕಿ, ಜಿಲ್ಲಾ ಸೋಮ ಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ ಗಾಣಿಗ, ಉಪಾಧ್ಯಕ್ಷ ಸೂರ್ಯನಾರಾಯಣ, ಎಲ್ಲ ಭಾಗದ ಗಾಣಿಗ ಸಮಾಜದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here