Home ಧಾರ್ಮಿಕ ಸುದ್ದಿ ದೇವಿಗಿದೆ ನಾಸ್ತಿಕನನ್ನು ಪರಿವರ್ತಿಸುವ ಶಕ್ತಿ: ಪಲಿಮಾರು ಶ್ರೀಪಾದರು

ದೇವಿಗಿದೆ ನಾಸ್ತಿಕನನ್ನು ಪರಿವರ್ತಿಸುವ ಶಕ್ತಿ: ಪಲಿಮಾರು ಶ್ರೀಪಾದರು

ಶ್ರೀ ಕ್ಷೇತ್ರ ಕಟೀಲು ಬ್ರಹ್ಮಕಲಶೋತ್ಸವ

1802
0
SHARE

ಕಟೀಲು: ಶ್ರೀ ಕ್ಷೇತ್ರಕ್ಕೆ ಆಗಮಿಸಿದ ನಾಸ್ತಿಕನನ್ನೂ ಆಸ್ತಿಕನಾಗಿ ಸಬಲ್ಲ ಶಕ್ತಿ ಕಟೀಲು ದೇವಿಗಿದೆ ಎಂದು ಪಲಿಮಾರು ಶ್ರೀಪಾದರು ಹೇಳಿದರು. ಅವರು ಗುರುವಾರ ಕಟೀಲು ಬ್ರಹ್ಮಕಲಶೋತ್ಸವ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯಿಂದ ಧರ್ಮ ಪುನರುತ್ಥಾನ ಸಾಧ್ಯ ಎಂದು ತಿಳಿಸಿದರು.

ಮಾಣಿಲ ಮೋಹನ ದಾಸ ಸ್ವಾಮೀಜಿ ಶುಭ ಹಾರೈಸಿದರು. ಟಿಟಿಡಿ ಬೋರ್ಡಿನ ಸದಸ್ಯ ಡಿ.ಪಿ. ಅನಂತ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಚಿವ ಕೋಟ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌, ಸಂಸದ ಮುನಿಸ್ವಾಮಿ, ಕೊಲ್ಲೂರು ದೇವಸ್ಥಾನದ ಅರ್ಚಕ ಶ್ರೀಧರ ಅಡಿಗ, ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ತಂತ್ರಿ ವೇದವ್ಯಾಸ ತಂತ್ರಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅಧ್ಯಕ್ಷ ಸನತ್‌ಕುಮಾರ್‌ ಶೆಟ್ಟಿ ಕೊಡೆತ್ತೂರುಗುತ್ತು, ನಟಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ, ಕರ್ಣಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌., ಡಾ| ಕಟೀಲು ಸುರೇಶ್‌ ರಾವ್‌, ಉದ್ಯಮಿಗಳಾದ ಸತೀಶ್‌ ಶೆಟ್ಟಿ ಪಡುಬಿದ್ರೆ, ಮರವೂರು ಕರುಣಾಕರ ಶೆಟ್ಟಿ, ಕಟೀಲು ವಾಮಯ್ಯ ಬಿ. ಶೆಟ್ಟಿ, ಪ್ರಕಾಶ್‌ ಶೆಟ್ಟಿ, ಸಾಲಿಗ್ರಾಮ ರಘು ನಾಥ ಸೋಮಯಾಜಿ, ಡಾ| ದೇವಿ ಪ್ರಸಾದ್‌ ಶೆಟ್ಟಿ, ಐಕಳ ಹರೀಶ್‌ ಶೆಟ್ಟಿ, ಶಶಿಕಿರಣ್‌ ಶೆಟ್ಟಿ, ಅತ್ತೂರು ಭಂಡಾರಮನೆ ರಾಜೇಶ್‌ ಶೆಟ್ಟಿ, ಉದಯಕುಮಾರ್‌ ಮಡಂತ್ಯಾರು, ಪಿಲಾರ್‌ಖಾನ ಕರುಣಾಕರ ದೇವು ಶೆಟ್ಟಿ, ಕಲ್ಲಮುಂಡ್ಕೂರು ಜಯರಾಮ ಶೆಟ್ಟಿ, ಕುಸುಮೋಧರ ಡಿ. ಶೆಟ್ಟಿ,, ಪದ್ಮನಾಭ ಪಯ್ಯಡೆ, ರಾಜೇಶ್‌ ಶೆಟ್ಟಿ, ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ರಾಘವೇಂದ್ರ ಆಚಾರ್ಯ ಬಜಪೆ, ಜೆ. ಸಿ. ಕುಮಾರ್‌ ಕಟೀಲು, ಪೆರ್ಮುದೆ ಶ್ರೀಧರ ಪೂಜಾರಿ, ಸುನಂದಾ ಶೆಟ್ಟಿ, ಮಾಲಾಡಿ ಅಜಿತ್‌ ಕುಮಾರ್‌ರೈ, ಉದಯಕುಮಾರ್‌, ಕಿಶೋರ್‌ ಶೆಟ್ಟಿ, ಸಂದೇಶ್‌ ಶೆಟ್ಟಿ ಉಪಸ್ಥಿತರಿದ್ದರು. ಕ್ಷೇತ್ರದ ಶ್ರೀಹರಿ ನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು.

ತಾಯಿಯ ಆಶೀರ್ವಾದ: ಬೊಮ್ಮಾಯಿ
ಪ್ರತಿ ಚುನಾವಣೆಯ ಸಂದರ್ಭದಲ್ಲಿ ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿ ಹೋಗುತ್ತೇನೆ. ತಾಯಿ ಆಶೀರ್ವಾದ ನೀಡಿ ಹರಸಿದ್ದಾಳೆ. ಇಂತಹ ಧಾರ್ಮಿಕ ಕ್ಷೇತ್ರಗಳು ಧರ್ಮ, ಸಂಸ್ಕೃತಿಯನ್ನು ಉಳಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

LEAVE A REPLY

Please enter your comment!
Please enter your name here